ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೇಟಿಎಂ ಷೇರು ಖರೀದಿ ತಳ್ಳಿ ಹಾಕಿದ ಅದಾನಿ

Published 29 ಮೇ 2024, 14:36 IST
Last Updated 29 ಮೇ 2024, 14:36 IST
ಅಕ್ಷರ ಗಾತ್ರ

ನವದೆಹಲಿ: ‘ಅದಾನಿ ಸಮೂಹಕ್ಕೆ ತನ್ನ ಕಂಪನಿಯ ಷೇರುಗಳನ್ನು ಮಾರಾಟ ಮಾಡುವ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಬುಧವಾರ ಸ್ಪಷ್ಟಪಡಿಸಿದೆ.

ಅದಾನಿ ಸಮೂಹ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ‘ಷೇರು ಖರೀದಿ ಕುರಿತ ಸುದ್ದಿಯು ಸತ್ಯಕ್ಕೆ ದೂರವಾದುದು’ ಎಂದು ಹೇಳಿದೆ.

ಉದ್ಯಮಿ ಗೌತಮ್‌ ಅದಾನಿ ಅವರು ಡಿಜಿಟಲ್‌ ಪಾವತಿ ವಲಯಕ್ಕೆ ಪ್ರವೇಶಿಸಲು ನಿರ್ಧರಿಸಿದ್ದಾರೆ. ಹಾಗಾಗಿ, ಒನ್‌97 ಕಮ್ಯುನಿಕೇಷನ್‌ನ ಬಹುಪಾಲು ಷೇರುಗಳ ಖರೀದಿಗೆ ಮುಂದಾಗಿದ್ದಾರೆ. ಈ ಕುರಿತು ಸಿಇಒ ವಿಜಯ್‌ಶೇಖರ್ ಶರ್ಮಾ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು. 

‘ಪೇಟಿಎಂನ ಷೇರು ಖರೀದಿ ಕುರಿತ ವರದಿಯು ಆಧಾರರಹಿತವಾಗಿದೆ. ಈ ಕುರಿತು ಚರ್ಚೆ ನಡೆದಿಲ್ಲ’ ಎಂದು ಅದಾನಿ ಸಮೂಹದ ವಕ್ತಾರರು ತಿಳಿಸಿದ್ದಾರೆ.

ಪೇಟಿಎಂ ಷೇರಿನ ಮೌಲ್ಯ ಏರಿಕೆ:

ಅದಾನಿ ಸಮೂಹವು ಪೇಟಿಎಂ ಷೇರುಗಳನ್ನು ಖರೀದಿಸಲಿದೆ ಎಂಬ ವರದಿಯಿಂದಾಗಿ ಒನ್‌97 ಕಮ್ಯುನಿಕೇಷನ್‌ ಷೇರಿನ ಮೌಲ್ಯದಲ್ಲಿ ಶೇ 5ರಷ್ಟು ಏರಿಕೆ ಆಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆ ₹359ಕ್ಕೆ ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT