ಸೋಮವಾರ, ಜುಲೈ 26, 2021
26 °C
ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಳ

ಎರಡನೇ ದಿನವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಎರಡನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ಪ್ರತಿ ಲೀಟರ್‌ ಮಾರಾಟ ಬೆಲೆಯನ್ನು 60 ಪೈಸೆಯಂತೆ ಹೆಚ್ಚಿಸಿವೆ.

83 ದಿನಗಳ ನಂತರ ಪ್ರತಿದಿನ ಇಂಧನ ಬೆಲೆ ಪರಿಷ್ಕರಿಸುವ ನೀತಿ ಜಾರಿಗೆ ಬಂದಂತಾಗಿದೆ.

ಈಗ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ₹ 74.75 ಮತ್ತು ಡೀಸೆಲ್‌ ಬೆಲೆ ₹ 67.16ಕ್ಕೆ ತಲುಪಿದಂತಾಗಿದೆ.

ತೈಲ ಮಾರಾಟ ಕಂಪನಿಗಳು ಅಡುಗೆ ಅನಿಲ (ಎಲ್‌ಪಿಜಿ) ಮತ್ತು ವಿಮಾನ ಇಂಧನ (ಎಟಿಎಫ್‌) ಬೆಲೆಯನ್ನು ನಿಯಮಿತವಾಗಿ ಪರಿಷ್ಕರಿಸುತ್ತ ಬಂದಿದ್ದರೂ, ಮಾರ್ಚ್‌ 16 ರಿಂದ  ಇಂಧನ ಬೆಲೆ ಪರಿಷ್ಕರಿಸಿರಲಿಲ್ಲ. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರ ಏರಿಳಿತ ದಾಖಲಿಸಿತ್ತು.

ತೈಲ ಬೆಲೆ ಕುಸಿತದ ಲಾಭ ಪಡೆಯಲು ಸರ್ಕಾರ ಮಾರ್ಚ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಡ್ಯೂಟಿಯನ್ನು ಪ್ರತಿ ಲೀಟರ್‌ಗೆ ₹ 3ರಂತೆ ಹೆಚ್ಚಿಸಿತ್ತು. ಮೇ 6 ರಂದು ಮತ್ತೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕ್ರಮವಾಗಿ ₹ 10 ಮತ್ತು ₹ 13ರಂತೆ ಎಕ್ಸೈಸ್‌ ಡ್ಯೂಟಿ ವಿಧಿಸಿತ್ತು.

ಹೊರೆಯಾಗದ ಎಕ್ಸೈಸ್‌ ಸುಂಕ: ತೈಲ ಮಾರಾಟ ಕಂಪನಿಗಳು ಅಬಕಾರಿ ಸುಂಕ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.

ಅಗ್ಗದ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಇಂಧನ ಬೆಲೆಗಳನ್ನು ಇಳಿಸುವುದಕ್ಕೆ ಬದಲಾಗಿ ಸುಂಕ ಹೆಚ್ಚಳವನ್ನು ತಮ್ಮ ನಷ್ಟ ಸರಿದೂಗಿಸಲು ಹೊಂದಾಣಿಕೆ ಮಾಡಿಕೊಂಡಿದ್ದವು. ಏಪ್ರಿಲ್‌ 1ರಿಂದ ಜಾರಿಗೆ ಬಂದ ಬಿಎಸ್‌6 ದರ್ಜೆಯ ಗರಿಷ್ಠ ಶುದ್ಧತೆಯ ಇಂಧನ ಮಾರಾಟಕ್ಕೆ ಪ್ರತಿ ಲೀಟರ್‌ಗೆ ವಿಧಿಸಿದ್ದ ₹ 1 ಹೆಚ್ಚುವರಿ ಬೆಲೆಯನ್ನೂ ಗ್ರಾಹಕರಿಗೆ ವರ್ಗಾಯಿಸದೆ ಹೊಂದಾಣಿಕೆ ಮಾಡಿಕೊಂಡಿದ್ದವು.

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.