ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ಕು ವರ್ಷದಲ್ಲಿ 2.68 ಲಕ್ಷ ಪ್ರಯಾಣಿಕ ವಾಹನಗಳ ರಫ್ತು

Published 10 ಜೂನ್ 2024, 14:33 IST
Last Updated 10 ಜೂನ್ 2024, 14:33 IST
ಅಕ್ಷರ ಗಾತ್ರ

ನವದೆಹಲಿ: ಭಾರತದಿಂದ ಹಿಂದಿನ ನಾಲ್ಕು ಹಣಕಾಸು ವರ್ಷಗಳಲ್ಲಿ 2.68 ಲಕ್ಷ ಪ್ರಯಾಣಿಕ ವಾಹನಗಳು ರಫ್ತಾಗಿವೆ.

ಈ ಪೈಕಿ ಶೇ 70ರಷ್ಟು ವಾಹನಗಳು ಮಾರುತಿ ಸುಜುಕಿ ಇಂಡಿಯದ್ದಾಗಿವೆ ಎಂದು ಕೈಗಾರಿಕಾ ಸಚಿವಾಲಯದ ಅಂಕಿ–ಅಂಶಗಳು ತಿಳಿಸಿವೆ.

2020–21ರ ಹಣಕಾಸು ವರ್ಷದಲ್ಲಿ 4.04 ಲಕ್ಷ ವಾಹನಗಳು ರಫ್ತಾಗಿದ್ದವು. ಇದು 2023–24ರ ವೇಳೆಗೆ 6.72 ಲಕ್ಷಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಮಾರುತಿ ಸುಜುಕಿ ಇಂಡಿಯಾದ 1.85 ಲಕ್ಷ ವಾಹನಗಳು ರಫ್ತಾಗಿವೆ.

ಹೆಚ್ಚಿನ ಮಾದರಿಗಳು, ಜಾಗತಿಕ ತಯಾರಿಕಾ ಮಾನದಂಡಗಳ ಅನುಸರಣೆಯಿಂದ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಅಧಿಕಾರಿ ರಾಹುಲ್‌ ಭಾರ್ತಿ ತಿಳಿಸಿದ್ದಾರೆ.

ಪ್ರಸ್ತುತ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಚಿಲಿ, ಮೆಕ್ಸಿಕೊ, ಫಿಲಿಪ್ಪೀನ್ಸ್, ಇಂಡೊನೇಷ್ಯಾ, ಐವರಿ ಕೋಸ್ಟ್‌ ಸೇರಿದಂತೆ ಜಗತ್ತಿನ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕಂಪನಿ ವಾಹನಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದರು.

ಹಿಂದಿನ ಹಣಕಾಸು ವರ್ಷದಲ್ಲಿ ಮಾರುತಿ ಸುಜುಕಿ ಇಂಡಿಯಾ ರಫ್ತು ಶೇ 10ರಷ್ಟು ಹೆಚ್ಚಳವಾಗಿದೆ. 2.55 ಲಕ್ಷದಿಂದ 2.80 ಲಕ್ಷಕ್ಕೆ ವಾಹನಗಳ ಮಾರಾಟವು ಏರಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT