ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಆಟಕ್ಕೆ ಶೇ 28 ಜಿಎಸ್‌ಟಿ: ಸಂಸತ್‌ ಒಪ್ಪಿಗೆ

Published 11 ಆಗಸ್ಟ್ 2023, 19:11 IST
Last Updated 11 ಆಗಸ್ಟ್ 2023, 19:11 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆನ್‌ಲೈನ್‌ ಆಟಗಳು, ಕ್ಯಾಸಿನೊ ಮತ್ತು ಕುದುರೆ ರೇಸ್‌ಗೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸುವ ತಿದ್ದುಪಡಿ ಮಸೂದೆಗೆ ಸಂಸತ್‌ ಶುಕ್ರವಾರ ಅನುಮೋದನೆ ನೀಡಿದೆ.

ಕೇಂದ್ರ ಜಿಎಸ್‌ಟಿ (ತಿದ್ದುಪಡಿ) ಮಸೂದೆ 2023 ಮತ್ತು ಸಮಗ್ರ ಜಿಎಸ್‌ಟಿ (ತಿದ್ದುಪಡಿ) ಮಸೂದೆ 2023ನ್ನು ಮಂಡಿಸಲಾಗಿದ್ದು, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶದ ಇ–ಗೇಮಿಂಗ್ ಕಂಪನಿಗಳು  ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಒಂದೊಮ್ಮೆ ವಿದೇಶಿ ಕಂಪನಿಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೇ ಇದ್ದರೆ ಮತ್ತು ತೆರಿಗೆ ಪಾವತಿ ನಿಯಮಗಳನ್ನು ಅನುಸರಿಸದೇ ಇದ್ದರೆ ಆನ್‌ಲೈನ್‌ ಗೇಮಿಂಗ್‌ ಬಳಕೆಯನ್ನು ತಡೆಹಿಡಿಯುವ ಅವಕಾಶವನ್ನೂ ಕಲ್ಪಿಸುತ್ತದೆ.

ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಮಸೂದೆಗಳಿಗೆ ತಿದ್ದುಪಡಿ ತಂದಿರುವುದರಿಂದ ಇದೀಗ ರಾಜ್ಯಗಳು ರಾಜ್ಯ ಜಿಎಸ್‌ಟಿಗೆ ತಿದ್ದುಪಡಿ ತರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT