ಭಾರತದ ಅತಿದೊಡ್ಡ ಆನ್ಲೈನ್ ರಿಟೇಲರ್ ಫ್ಲಿಪ್ಕಾರ್ಟ್ನಿಂದ ಹೊರ ನಡೆಯುವ ಬಗ್ಗೆ ಸಾಫ್ಟ್ಬ್ಯಾಂಕ್ ಕೊನೆಗೂ ನಿರ್ಧಾರಕ್ಕೆ ಬಂದಿದೆ. ಈ ಪಾಲು ಬಂಡವಾಳ ಮಾರಾಟದ ವಿವರಗಳನ್ನು ನೀಡಲು ಸಾಫ್ಟ್ಬ್ಯಾಂಕ್ನ ವಕ್ತಾರರು ನಿರಾಕರಿಸಿದ್ದಾರೆ. ಈ ನಿರ್ಧಾರವು, ಫ್ಲಿಪ್ಕಾರ್ಟ್ನಲ್ಲಿಯೇ ಉಳಿಯುವ ಅಥವಾ ಹೊರ ನಡೆಯುವುದಕ್ಕೆ ಸಂಬಂಧಿಸಿದ ಎರಡು ವಾರಗಳ ಅನಿಶ್ಚಿತತೆಗೆ ಕೊನೆ ಹಾಡಿದೆ. ಶೇ 20ರಷ್ಟು ಪಾಲು ಬಂಡವಾಳವನ್ನು ಸಾಫ್ಟ್ಬ್ಯಾಂಕ್ ₹ 26 ಸಾವಿರ ಕೋಟಿಗಳಿಗೆ ಮಾರಾಟ ಮಾಡಲಿದೆ ಎಂದು ಅಂದಾಜಿಸಲಾಗಿದೆ.