ಶನಿವಾರ, ಡಿಸೆಂಬರ್ 7, 2019
22 °C

ನಿಯಮ ಉಲ್ಲಂಘನೆ: ಹುವೈ ಸಿಎಫ್‌ಒ ಬಂಧನ

ಎಪಿ Updated:

ಅಕ್ಷರ ಗಾತ್ರ : | |

Deccan Herald

ಟೊರಾಂಟೊ: ಅಮೆರಿಕಕ್ಕೆ ಗಡಿಪಾರು ಶಿಕ್ಷೆ ಎದುರಿಸುತ್ತಿದ್ದ ಚೀನಾದ ಹುವೈ ಟೆಕ್ನಾಲಜೀಸ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಮೆಂಗ್ ವಾಂಗ್‌ಝೌ ಅವರನ್ನು ಕೆನಡಾದ ವ್ಯಾಂಕೋವರ್‌ನಲ್ಲಿ ಬಂಧಿಸಲಾಗಿದೆ.

ಮೆಂಗ್ ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ವಕ್ತಾರ ಇಯಾನ್ ಮೆಕ್‌ಲಿಯೋಡ್ ಅವರು ಬುಧವಾರ ರಾತ್ರಿ ಖಚಿತಪಡಿಸಿದ್ದಾರೆ. ಬಂಧನ ಕುರಿತಂತೆ ಪ್ರಕಟಣೆ ಹೊರಡಿಸಲು ನಿಷೇಧ ಇರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಶುಕ್ರವಾರ ವಿಚಾರಣೆ ನಡೆಯಲಿದೆ.

ಇರಾನ್ ಮೇಲೆ ಅಮೆರಿಕವು ಕೆಲ ನಿರ್ಬಂಧಗಳನ್ನು ಹೇರಿದೆ. ಹುವೈ ಕಂಪನಿಯು ನಿರ್ಬಂಧಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಅಮೆರಿಕ ತನಿಖೆ ನಡೆಸುತ್ತಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಈ ಮೊದಲು ವರದಿ ಮಾಡಿತ್ತು. ಇದರ ಭಾಗವಾಗಿ ಮೆಂಗ್ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಮೆಂಗ್ ಅವರು, ಹುವೈ ಕಂಪನಿ ಸ್ಥಾಪಕ ರೆನ್ ಝೆಂಗ್‌ಫೈ ಅವರ ಮಗಳು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು