ಶನಿವಾರ, ಅಕ್ಟೋಬರ್ 19, 2019
28 °C

ಕಂಪನಿ ದತ್ತಾಂಶ ದುರ್ಬಳಕೆ: ಬಂಧನ

Published:
Updated:
Prajavani

ಬೆಂಗಳೂರು: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕಂಪನಿಗೆ ಸಂಬಂಧಿಸಿದ ದತ್ತಾಂಶಗಳನ್ನು ಕದ್ದು, ಕೆಲಸ ಬಿಟ್ಟ ಬಳಿಕ ಆ ಮಾಹಿತಿಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸೈಬರ್‌ ಕ್ರೈಂ ‍ಪೊಲೀಸರು ಬಂಧಿಸಿದ್ದಾರೆ.

ಕಗ್ಗಲಿಪುರದ ನಿವಾಸಿ ಕಾಮಿನ್‌ ‍ಪ್ರಜಾಪತಿ (40) ಬಂಧಿತ ವ್ಯಕ್ತಿ. ಆರೋಪಿಯ ಬಳಿ ಇದ್ದ ಲ್ಯಾಪ್‌ಟಾಪ್, ಸಿಪಿಯು ಮತ್ತು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

2017ರ ಆಗಸ್ಟ್‌ನಿಂದ 2019ರ ಏಪ್ರಿಲ್‌ವರೆಗೆ ಖಾಸಗಿ ಕಂಪನಿಯಲ್ಲಿ ಹಿರಿಯ ಅಕೌಂಟ್‌ ಮ್ಯಾನೇಜರ್‌ ಆಗಿ ಆರೋಪಿ ಕೆಲಸ ಮಾಡುತ್ತಿದ್ದ. ತಾನು ಕೆಲಸ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕಂಪನಿಗೆ ಸಂಬಂಧಿಸಿ ಗ್ರಾಹಕರ ಬ್ಯಾಂಕ್‌ ವಿವರ, ಕ್ರೆಡಿಟ್‌ ಕಾರ್ಡ್‌, ಪೇ ರೋಲ್‌, ಬಿಲ್ಲಿಂಗ್‌ ವಿವರ ಮತ್ತಿತರ ಮಾಹಿತಿಗಳನ್ನು ತನ್ನ ಖಾಸಗಿ ಇ–ಮೇಲ್‌ಗೆ ರವಾನಿಸಿಕೊಂಡಿದ್ದ. ಕಂಪನಿ ಬಿಟ್ಟ ಬಳಿಕವೂ ಆ ಮಾಹಿತಿಗಳನ್ನೆಲ್ಲ ತನ್ನ ಬಳಿಯಲ್ಲೇ ಇಟ್ಟುಕೊಂಡು ದುರ್ಬಳಕೆ ಮಾಡಿಕೊಂಡಿರುವುದು ವಿಚಾರಣೆಯಿಂದ ಬಹಿರಂಗವಾಗಿದೆ.

Post Comments (+)