ಎಟಿಎಂ ಯಂತ್ರ ಒಡೆದ ಕಳ್ಳ

7

ಎಟಿಎಂ ಯಂತ್ರ ಒಡೆದ ಕಳ್ಳ

Published:
Updated:

ಬೆಂಗಳೂರು: ಮಿಲ್ಲರ್ಸ್ ರಸ್ತೆಯಲ್ಲಿರುವ ‘‍ಪಂಜಾಬ್ ನ್ಯಾಷನಲ್ ಬ್ಯಾಂಕ್’ ಎಟಿಎಂ ಘಟಕಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ, ಯಂತ್ರದ ಲಾಕರ್‌ ಮುರಿದು ಹಣ ದೋಚಲು ಯತ್ನಿಸಿದ್ದಾನೆ.

ಶುಕ್ರವಾರ ನಸುಕಿನ ವೇಳೆ (3.30ರ ಸುಮಾರಿಗೆ) ಈ ಘಟನೆ ನಡೆದಿದ್ದು, ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಿ ತಾರಾ ಕುಮಾರಿ ಅವರು ಹೈಗ್ರೌಂಡ್ಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಆಧರಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ಯಂತ್ರದ ಡಿಜಿಟಲ್ ಲಾಕರ್‌ ವ್ಯವಸ್ಥೆಯನ್ನು ಒಡೆದು ಹಾಕಿದ್ದ ಆರೋಪಿಗೆ, ಎಷ್ಟೇ ಪ್ರಯತ್ನಪಟ್ಟರೂ ಕ್ಯಾಷ್ ಬಾಕ್ಸನ್ನು ಹೊರಗೆ ತೆಗೆಯಲು ಸಾಧ್ಯವಾಗಿಲ್ಲ. ಸುಮಾರು ಅರ್ಧ ತಾಸು ಕಸರತ್ತು ನಡೆಸಿ, ಕೊನೆಗೆ ಬರಿಗೈಲಿ ವಾಪಸ್ ಹೋಗಿದ್ದಾನೆ’ ಎಂದು ಹೈಗ್ರೌಂಡ್ಸ್ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !