ಗುರುವಾರ , ಫೆಬ್ರವರಿ 25, 2021
30 °C

96ನೇ ಹುಟ್ಟುಹಬ್ಬ ಆಚರಿಸಿದ ದಿಲೀಪ್‌ ಕುಮಾರ್‌

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಮುಂಬೈ: ಬಾಲಿವುಡ್‌ ನಟ ದಿಲೀಪ್‌ ಕುಮಾರ್‌ ಅವರು ಮಂಗಳವಾರ 96ನೇ ವರ್ಷಕ್ಕೆ ಕಾಲಿಟ್ಟಿದ್ದು, ಕುಟುಂಬಸ್ಥರು ಮತ್ತು ಆಪ್ತಸ್ನೇಹಿತರ ನಡುವೆ ಹುಟ್ಟುಹಬ್ಬವನ್ನು ಆಚರಿಸಲಾಯಿತು ಎಂದು ಅವರ ಪತ್ನಿ ಸೈರಾ ಭಾನು ತಿಳಿಸಿದರು.

’ಕಳೆದ ಕೆಲವು ವರ್ಷಗಳಿಂದ ದಿಲೀಪ್‌ ಕುಮಾರ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಕಾರಣದಿಂದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಯೋಚನೆಯಿಲ್ಲ‘ ಎಂದರು.

’ಕೇವಲ ಆಪ್ತರ ಜೊತೆ ಹುಟ್ಟುಹಬ್ಬ ಆಚರಿಸಲಾಗಿದೆ. ಅವರು ನನ್ನ ಪಾಲಿನ ಕೊಹಿನೂರ್‌ ಇದ್ದಂತೆ, ನನಗೆ ಸಿಕ್ಕ ಅತ್ಯಂತ ಅಮೂಲ್ಯವಾದ ಉಡುಗೊರೆ‘ ಎಂದು ಬಣ್ಣಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.