ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆವ ದರೋಜಿ ಕೆರೆ

200 ವರ್ಷಗಳ ಇತಿಹಾಸ ಹೊಂದಿರುವ ಬೃಹತ್ ಕೆರೆ
ಎರ್ರಿಸ್ವಾಮಿ ಬಿ.
Published 7 ಏಪ್ರಿಲ್ 2024, 6:21 IST
Last Updated 7 ಏಪ್ರಿಲ್ 2024, 6:21 IST
ಅಕ್ಷರ ಗಾತ್ರ

ತೋರಣಗಲ್ಲು: ಹೋಬಳಿಯ ಹೊಸದರೋಜಿ ಗ್ರಾಮದ ಹೊರವಲಯದಲ್ಲಿರುವ ಕರ್ನಾಟಕದ ಎರಡನೇ ಹಾಗೂ ಬಳ್ಳಾರಿ ಜಿಲ್ಲೆಯ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ದರೋಜಿಯ ಐತಿಹಾಸಿಕ ಕೆರೆ. ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಬೃಹತ್ ಕೆರೆ, ಈ ಭಾಗದ ರೈತರ ಜೀವನಾಡಿಯೂ ಆಗಿದೆ. 

ಕೆರೆಯ ಏರಿಯ ಸುಂದರವಾದ ದೃಶ್ಯ, ಹಸಿರಿನಿಂದ ಕಂಗೊಳಿಸುವ ಭತ್ತದ ಗದ್ದೆಗಳು, ಬೆಟ್ಟದ ಅಂಚಿನಲ್ಲಿರುವ ಕೋಡಿವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಸುತ್ತಲಿನ ಸ್ವಚ್ಛಂದ ಪ್ರಕೃತಿಯ ಸೊಬಗು ಸವಿಯಲು ಬಳ್ಳಾರಿ, ವಿಜಯಗನರ ಜಿಲ್ಲೆಗಳ ನೂರಾರು ಪ್ರವಾಸಿಗರು ನಿರಂರವಾಗಿ ಭೇಟಿ ನೀಡುತ್ತಿರುತ್ತಾರೆ.

2,840 ಎಕರೆ ವಿಸ್ತೀರ್ಣವಿರುವ ವಿಶಾಲವಾದ ಕೆರೆಯು,  11 ಗ್ರಾಮಗಳಲ್ಲಿನ 3,222 ಎಕರೆಗೆ ನೀರು ಒದಗಿಸುತ್ತಿದೆ.

ಸಂಡೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಹರಿಯುವ ನಾಲ್ಕು ಹಳ್ಳಗಳ ನೀರನ್ನು ತಡೆಯುವ, ಅಂತರ್ಜಲ ಪ್ರಮಾಣ ಹೆಚ್ಚಿಸುವ, ಕೃಷಿ, ಮೀನುಗಾರಿಕೆ, ಜನ–ಜಾನುವಾರುಗಳ ದಾಹ ತಣಿಸುವ ಹಾಗೂ ಈ ಪ್ರದೇಶವನ್ನು ಹಸಿರು ವಲಯವನ್ನಾಗಿಸುವ ಉದ್ದೇಶದಿಂದ 1797ರಲ್ಲಿ ಈ ಕೆರೆಯನ್ನು ನಿರ್ಮಿಸಲಾಗಿದೆ.

ಕೆರೆ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಪ್ರವಾಸಿ ಮಂದಿರ, ಎತ್ತರದ ವೀಕ್ಷಣಾ ಗೋಪುರ, ಜಾಂಬವ ಉದ್ಯಾನ ನಿರ್ಮಿಸಲಾಗಿದ್ದು, ಇವು ಕೆರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಬಣ್ಣ ಬಣ್ಣದ ಹಕ್ಕಿಗಳ ಕಲರವ, ಹಸಿರುಟ್ಟ ಪರಿಸರ, ವನ್ಯಪ್ರಾಣಿಗಳಿಗೆ ಆಸರೆಯಾದ ಬಿಳಿ ಕಲ್ಲಿನ ಬೆಟ್ಟಗಳ ಸಾಲನ್ನು ವೀಕ್ಷಣಾ ಗೋಪುರದ ಮೂಲಕ ಕಂಡು, ಆನಂದಿದಬಹುದು.

ದರೋಜಿ ಕೆರೆಯ ನೀರಿನ ಮಟ್ಟ ಅಳೆಯು ಪ್ರಾಚೀನ ಕಲ್ಲಿನ ತೂಬು
ದರೋಜಿ ಕೆರೆಯ ನೀರಿನ ಮಟ್ಟ ಅಳೆಯು ಪ್ರಾಚೀನ ಕಲ್ಲಿನ ತೂಬು

ದರೋಜಿ ಕೆರೆಯ ವಿವರ 3.60 ಕಿ.ಮೀ.;ಏರಿ ಉದ್ದ 4.57 ಮೀ.;ಅಗಲ 136.20 ಮೀ.;ಕೋಡಿ ಉದ್ದ 1507.35 ಅಡಿ;ನೀರಿನ ಮಟ್ಟ 610.15 ಎಂ.ಸಿ.ಎಫ್.ಟಿ;ನೀರಿನ ಪರಿಮಿತಿ

ಕೆರೆಗೆ ಕಲುಷಿತ ನೀರು ‘ದರೋಜಿ ಕೆರೆಯಲ್ಲಿ ಹೂಳು ತುಂಬಿದ್ದು ನೀರಿನ ಪ್ರಮಾಣ ಕ್ಷೀಣಿಸಿದೆ. ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಇದರಿಂದ ಬೆಳೆಗಳ ಇಳುವರಿ ಕುಂಟಿತಗೊಂಡು ಭೂಮಿ ಬರಡಾಗುತ್ತಿದೆ. ಜಿಲ್ಲಾಡಳಿತವು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ದರೋಜಿ ಕೆರೆಯ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ಕಾಳಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT