ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮೇಲೆ ಅತ್ಯಾಚಾರ: ಶ್ರೀಲಂಕಾದ ಇಬ್ಬರ ಸೆರೆ

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ : ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪೆನಿಯೊಂದರ ಇಬ್ಬರು ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಖಾಸಗಿ ಸಂಸ್ಥೆಯ ಜನರಲ್‌ ಮ್ಯಾನೇಜರ್‌ ದಿಲೀಪ್‌ ಪಿಂಟೋ (55) ಹಾಗೂ ಹಿರಿಯ ಅಧಿಕಾರಿ ಮಲ್ಲ ಶ್ಯಾಮ್‌ ಸುಂದರ್‌ (30) ಬಂಧಿತರು. ಇಬ್ಬರೂ ಶ್ರೀಲಂಕಾದ ನಾಗರಿಕರು’ ಎಂದು ಡಿಎಸ್‌ಪಿ (ಎಸ್ಸಿ/ಎಸ್ಟಿ ಘಟಕ) ಸಿ.ಎಚ್‌.ವಿವೇಕಾನಂದ ತಿಳಿಸಿದರು.

‘ಜಾರ್ಖಂಡ್‌ನ ಬುಡಕಟ್ಟು ಸಮುದಾಯದ 28 ವರ್ಷದ ಮಹಿಳೆಯು ಇಲ್ಲಿನ ಮಲ್ಕಾಪುರಂ ಪ್ರದೇಶದಲ್ಲಿ ನೆಲೆಸಿದ್ದರು. ಅಚ್ಯುತಪುರಂನ ವಿಶೇಷ ಆರ್ಥಿಕ ವಲಯದಲ್ಲಿರುವ ಪ್ಯಾಕೇಜಿಂಗ್‌ ಕಂಪೆನಿಯೊಂದರಲ್ಲಿ ಸಂತ್ರಸ್ತೆಯು ಕೆಲಸ ಮಾಡುತ್ತಿದ್ದರು. ಕೆಲತಿಂಗಳಿನಿಂದ ಮಹಿಳೆ ಮೇಲೆ ಇಬ್ಬರೂ ಹಲವು ಸಲ ಪ್ರತ್ಯೇಕವಾಗಿ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ವಿವೇಕಾನಂದ ತಿಳಿಸಿದರು.

‘ಇದಾದ ಬಳಿಕ ಆಕೆಗೆ ಬಡ್ತಿ ನೀಡಲಾಗಿತ್ತು. ಆದರೆ ಕಳೆದ ಡಿಸೆಂಬರ್‌ನಲ್ಲಿ ‘ಕಳಪೆ ನಿರ್ವಹಣೆ’ ನೆಪದಲ್ಲಿ ಕೆಲಸದಿಂದಲೇ ಆಕೆಯನ್ನು ತೆಗೆದುಹಾಕಲಾಗಿತ್ತು. ಸಂತ್ರಸ್ತ ಮಹಿಳೆ ಜನವರಿಯಲ್ಲಿ ವಿಶಾಖಪಟ್ಟಣದ ಗ್ರಾಮೀಣ ಎಸ್ಪಿ ರಾಹುಲ್‌ದೇವ್ ಶರ್ಮಾ ಅವರಿಗೆ  ಲಿಖಿತ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸುವಂತೆ ನನಗೆ ತಿಳಿಸಿದ್ದರು’ ಎಂದರು.

‘ಇಬ್ಬರೂ ಆರೋಪಿಗಳು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ತನಿಖೆ ವೇಳೆ ಬಯಲಾಗಿತ್ತು. ಇಬ್ಬರನ್ನೂ ಭಾನುವಾರ ರಾತ್ರಿ ಬಂಧಿಸಲಾಗಿದ್ದು, ಐಪಿಸಿ 376 (ಅತ್ಯಾಚಾರ) ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT