ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಹೊಣೆಯೂ ಇದೆ

ಅಕ್ಷರ ಗಾತ್ರ

ಬೆಂಗಳೂರಿನ ಕಸದ ಸಮಸ್ಯೆ ಮತ್ತೆ ಸುದ್ದಿಯಾಗುತ್ತಿದೆ. ಈ ಸಮಸ್ಯೆಗೆ ಸರ್ಕಾರ, ಬಿಬಿಎಂಪಿ ಮತ್ತು ಜನಪ್ರತಿನಿಧಿಗಳಷ್ಟೇ ನಗರದ ನಿವಾಸಿಗಳೂ ಕಾರಣರಾಗಿದ್ದಾರೆ. ಯಾವುದೇ ಹಬ್ಬದ ಸಂಭ್ರಮ ಮುಗಿದ ಮಾರನೆಯ ದಿನದಿಂದ ಹಲವು ದಿನಗಳವರೆಗೆ ಇಡೀ ಬೆಂಗಳೂರು ಗುಡ್ಡೆ ಗುಡ್ಡೆ ಕಸ ಹೊದ್ದು ಮಲಗಿರುತ್ತದೆ.

ಕಸ ಸಂಗ್ರಹಿಸುವ ವಾಹನ ಮನೆಮನೆಗೆ ಬರುತ್ತಿದ್ದರೂ, ನಿವಾಸಿಗಳು ಕಸ ವಿಂಗಡಿಸಿ ಕೊಡುತ್ತಿಲ್ಲ. ಮೂಲದಲ್ಲೇ ಕಸ ವಿಂಗಡಿಸಿ (ಒಣ ಕಸ, ಹಸಿ ಕಸ) ಕೊಡುವ ಜವಾಬ್ದಾರಿ ನಾಗರಿಕರಾದ ನಮ್ಮ ಮೇಲಿಲ್ಲವೇ? ಪೌರ ಕಾರ್ಮಿಕರಿಗೆ ಸಹಕಾರ ನೀಡುವ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಇನ್ನಾದರೂ ಮನಸ್ಥಿತಿಯನ್ನು ಬದಲಿಸಿಕೊಂಡು ಬೆಂಗಳೂರನ್ನು ಸುಂದರವಾಗಿಸುವತ್ತ ಹೆಜ್ಜೆ ಇಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT