ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಆಕರ್ಷಣೆಯ ‘ಅಟಲ್ ಟಿಂಕರಿಂಗ್ ಲ್ಯಾಬ್’

ಕವಿತಾಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯ
ಮಂಜುನಾಥ ಎನ್.ಬಳ್ಳಾರಿ
Published : 14 ಫೆಬ್ರುವರಿ 2024, 6:11 IST
Last Updated : 14 ಫೆಬ್ರುವರಿ 2024, 6:11 IST
ಫಾಲೋ ಮಾಡಿ
Comments

ಕವಿತಾಳ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ‘ಅಟಲ್ ಟಿಂಕರಿಂಗ್ ಲ್ಯಾಬ್’ ವಿಜ್ಞಾನ ಪ್ರಯೋಗಾಲಯ ಮಕ್ಕಳನ್ನು ಆಕರ್ಷಿಸುವುದರ ಜತೆಗೆ ವಿಜ್ಞಾನ ವಿಷಯದ ಬಗ್ಗೆ ಅವರಲ್ಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.

2019ರಲ್ಲಿ ಮಂಜೂರಾದರೂ ಕೋವಿಡ್ 19 ಹಿನ್ನೆಲೆಯಲ್ಲಿ ಎರಡು ವರ್ಷ ತಡವಾಗಿ ವ್ಯವಸ್ಥೆಗೊಳಿಸಲಾಗಿದ್ದು ಇದೀಗ ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಸಕ್ತಿಯಿಂದ ಕಲಿಯುವುದರ ಜತೆಗೆ ಹೊಸ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು ಪ್ರೇರೆಪಿಸುತ್ತಿದೆ.

ಪ್ರಯೋಗಾಲಯದಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕಾನಿಕಲ್ ಮತ್ತು 3ಡಿ ಪ್ರಿಂಟಿಂಗ್ (ಮೂರು ಆಯಾಮ)ನ ಮಷಿನ್ ಬಳಕೆ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ (ಎಐ) ಸೇರಿದಂತೆ ವಿವಿಧ ವಿಭಾಗಗಳಿದ್ದು ಮಕ್ಕಳು ಅವುಗಳ ಬಗ್ಗೆ ಆಸಕ್ತಿ ವಹಿಸಿ ಕಲಿಯುತ್ತಿದ್ದಾರೆ.

3ಡಿ ಪ್ರಿಂಟಿಂಗ್ ಯಂತ್ರದಲ್ಲಿ ಮೊಬೈಲ್ ಸ್ಟ್ಯಾಂಡ್, ಪೆನ್ ಸ್ಟ್ಯಾಂಡ್ ಸೇರಿದಂತೆ ವಿವಿಧ ವಸ್ತುಗಳನ್ನು ತಯಾರಿಸಿದ್ದಾರೆ. ಬಿಡಿ ಭಾಗಗಳನ್ನು ಬಳಸಿ ಮಕ್ಕಳು ತಯಾರಿಸಿದ ಬ್ಲೈಂಡ್ ಸ್ಟಿಕ್, ಮೊಬೈಲ್ ಮೂಲಕ ದೂರದಿಂದ ವಿದ್ಯುತ್ ಉಪಕರಣಗಳ ನಿಯಂತ್ರಣ, ಜಮೀನಿನಲ್ಲಿನ ಮಣ್ಣಿನ ತೇವಾಂಶ ಆಧರಿಸಿ ಸ್ವಯಂ ಆಗಿ ನೀರು ಹಾಯಿಸುವುದು, ವಾಶ್ ಬೇಸಿನ್‌ನಲ್ಲಿ ಪೈಪ್ ಹತ್ತಿರ ಕೈ ತರುತ್ತಿದ್ದಂತೆ ನಲ್ಲಿಯಿಂದ ನೀರು ಬರುವುದು ಈ ರೀತಿಯ ಹಲವು ಉಪಕರಣಗಳನ್ನು ಮಕ್ಕಳು ಯಶಸ್ವಿಯಾಗಿ ತಯಾರಿಸಿದ್ದಾರೆ. ಬಳಕೆ ಕುರಿತು ವಿವರಣೆ ನೀಡುವುದು ಗಮನ ಸೆಳೆಯುತ್ತಿದೆ.

8 ಮತ್ತು 9ನೇ ತರಗತಿಯ ಅಂದಾಜು 429 ಮಕ್ಕಳಿಗೆ ವಾರದಲ್ಲಿ ಎರಡು ದಿನ 50 ಜನರ ಒಂದು ತಂಡಕ್ಕೆ ಪ್ರಾಯೋಗಿಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

‘ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮೂಡಿಸುವುದು ಮತ್ತು ಅವರ ಆಸಕ್ತಿಗೆ ಅನಗುಣವಾಗಿ ವೃತ್ತಿ ಕೈಗೊಳ್ಳಲು ಆ ಮೂಲಕ ಸ್ವಾವಲಂಬಿಗಳನ್ನಾಗಿ ರೂಪಿಸುವುದು ಪ್ರಯೋಗಾಲಯದ ಪ್ರಮುಖ ಉದ್ದೇಶ’ ಎಂದು ವಿಜ್ಞಾನ ಶಿಕ್ಷಕಿ ಸಮೀನಾಭಾನು ಹೇಳಿದರು.

‘ತರಗತಿಯಲ್ಲಿ ಪಠ್ಯದ ಕಲಿಕೆಯಲ್ಲಿ ಹಿಂದುಳಿದ ಅಥವಾ ಸಾಮಾನ್ಯ ಎನಿಸಿಕೊಂಡ ಅನೇಕ ಮಕ್ಕಳು ಪ್ರಯೋಗಾಲಯದಲ್ಲಿ ಅತ್ಯಂತ ಚುರುಕಾಗಿ ಕಲಿಯುವುದು ಕಂಡು ಬರುತ್ತಿದೆ. ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದರ ಜತೆಗೆ ಅವರನ್ನು ಮೂಲ ವಿಜ್ಞಾನದ ಕಡೆ ಆಕರ್ಷಿಸುವುದು ಅಗತ್ಯ’ ಎಂದು ವಿಜ್ಞಾನ ಶಿಕ್ಷಕ ಪ್ರಾಣೇಶ ಮತ್ತು ಪ್ರಯೋಗಾಲಯ ತಂತ್ರಜ್ಞ ರಾಮಣ್ಣ ನಾಯಕ ಅಭಿಪ್ರಾಯಪಟ್ಟರು.

ಇಲಾಖೆ ನಿಯಮಾನುಸಾರ ವಿಷಯಗಳನ್ನು ಆಯ್ದುಕೊಂಡು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ. ಬಿಡಿ ಭಾಗಗಳನ್ನು ಬಳಸಿ ಮಕ್ಕಳು ತಯಾರಿಸಿದ ಅನೇಕ ಉಪಕರಣಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಪ್ರಾಣೇಶ, ವಿಜ್ಞಾನ ವಿಷಯ ಶಿಕ್ಷಕ

ವಿಷಯ ಶಿಕ್ಷಕರು ಮತ್ತು ಪ್ರಯೋಗಾಲಯ ತಂತ್ರಜ್ಞರು ಅತ್ಯಂತ ಕಾಳಜಿ ವಹಿಸಿ ಮಕ್ಕಳಿಗೆ ಕಲಿಸುತ್ತಿದ್ದಾರೆ. ಅಟಲ್ ಟಿಂಕರಿಂಗ್ ಲ್ಯಾಬ್ ನಮ್ಮ ಶಾಲೆಯ ಹೆಮ್ಮೆಯ ಪ್ರಯೋಗಾಲಯ.

ಮಂಜುಳಾ ಗಿರೀಶ ಅಂಗಡಿ, ಮುಖ್ಯ ಶಿಕ್ಷಕಿ

ಮನೆಯ ವಿವಿಧ ಅಂತಸ್ತಿನ ಹಲವು ಕೊಠಡಿಗಳ ವಿದ್ಯುತ್‌ ದೀಪಗಳನ್ನು ಮೊಬೈಲ್‌ ಆ್ಯಪ್‌ನಲ್ಲಿ ಧ್ವನಿ ಸಂದೇಶದ ಮೂಲಕ ಬೆಳಗಿಸುವುದು ಹಾಗೂ ಆರಿಸುವ ಉಪಕರಣ ತಯಾರಿಸಿದ್ದು ಕೂತೂಹಲ ಮೂಡಿಸಿದೆ.

ದೀಪಾ ಬಾಲಪ್ಪ ನಾಯಕ, ವಿದ್ಯಾರ್ಥಿನಿ

ಕವಿತಾಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 3ಡಿ ಪ್ರಿಂಟಿಂಗ್‌ ಮಷಿನ್‌ ಕುರಿತು ಮಕ್ಕಳಿಗೆ ಮಾಹಿತಿ ನೀಡುತ್ತಿರುವ ಶಿಕ್ಷಕಿ
ಕವಿತಾಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 3ಡಿ ಪ್ರಿಂಟಿಂಗ್‌ ಮಷಿನ್‌ ಕುರಿತು ಮಕ್ಕಳಿಗೆ ಮಾಹಿತಿ ನೀಡುತ್ತಿರುವ ಶಿಕ್ಷಕಿ
ಕವಿತಾಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ದ್ರೋಣ್‌ ತಯಾರಿಕೆ ಕುರಿತು ಶಿಕ್ಷಕ ಪ್ರಾಣೇಶ ಅವರು ಮಕ್ಕಳಿಗೆ ಮಾಹಿತಿ ನೀಡುತ್ತಿರುವುದು
ಕವಿತಾಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ದ್ರೋಣ್‌ ತಯಾರಿಕೆ ಕುರಿತು ಶಿಕ್ಷಕ ಪ್ರಾಣೇಶ ಅವರು ಮಕ್ಕಳಿಗೆ ಮಾಹಿತಿ ನೀಡುತ್ತಿರುವುದು
ಮಂಜುಳಾ ಗಿರೀಶ ಅಂಗಡಿ
ಮಂಜುಳಾ ಗಿರೀಶ ಅಂಗಡಿ
ಪ್ರಾಣೇಶ
ಪ್ರಾಣೇಶ
ದೀಪಾ ಬಾಲಪ್ಪ ನಾಯಕ
ದೀಪಾ ಬಾಲಪ್ಪ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT