ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಕ್ತಿಧಾಮ ಕಾಯಕಲ್ಪಕ್ಕೆ ನರೇಗಾ ಬಲ

ಸ್ಮಶಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನರೇಗಾ ಸಹಕಾರಿ: ತಾ.ಪಂ.ಇಒ ಪವಾರ್‌
ಉಮಾಪತಿ ರಾಮೋಜಿ
Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಶಕ್ತಿನಗರ: ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಜನರ ದುಡಿಯುವ ಕೈಗಳಿಗೆ ಕೆಲಸ ನೀಡುವ ಜೊತೆಗೆ ಗ್ರಾಮದ ಅಭಿವೃದ್ಧಿಗೂ ಬಲ ತುಂಬಿದೆ.

ರಾಯಚೂರು ತಾಲ್ಲೂಕಿನ ಶಾಖವಾದಿ ಗ್ರಾಮ ಪಂಚಾಯಿತಿಯ ಆಶ್ರಯ ಕಾಲೊನಿಯಲ್ಲಿರುವ ಸ್ಮಶಾನಕ್ಕೆ ಕಾಯಕಲ್ಪ ಕಲಿಸಲು ನರೇಗಾ ನೆರವಾಗಿದೆ.

ಸ್ಮಶಾನದಲ್ಲಿ ಜಾಲಿ ಕಂಟಿಗಳು ಬೆಳೆದು ಅಂತಿಮ ಸಂಸ್ಕಾರ ಮಾಡಲೂ ಕೂಡ ತೊಂದರೆ ಆಗಿತ್ತು. ಬಳಿಕ ನರೇಗಾ ಯೋಜನೆಯಡಿ ಅದನ್ನು ಅಭಿವೃದ್ಧಿ ಮಾಡಲಾಗಿದೆ. ಸ್ಮಶಾನ ಜಾಗದಲ್ಲಿ ತುಂಬಿದ್ದ ಎಲ್ಲಾ ಮುಳ್ಳು ಕಂಟಿಗಳನ್ನು ಕಡಿದು, ಭೂಮಿಯನ್ನು ಸಮತಟ್ಟು ಮಾಡಲಾಗಿದೆ. ಸುತ್ತಲೂ ಕಲ್ಲುಕಂಬಗಳನ್ನು ನೆಟ್ಟು, ತಂತಿ ಬೇಲಿ ಹಾಕಲಾಗಿದೆ. ಸ್ಮಶಾನದ ಮುಂಭಾಗದಲ್ಲಿ ಕಮಾನು ನಿರ್ಮಿಸಿ, ಸುಂದರಗೊಳಿಸಲಾಗಿದೆ.

ಇದಕ್ಕಾಗಿ ಶಾಖವಾದಿ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯಡಿ ಅಂದಾಜು ₹5 ಲಕ್ಷ ವೆಚ್ಚದಲ್ಲಿ ಕೂಲಿಗಾಗಿ ₹21,630, ಸಾಮಗ್ರಿಗಳ ಖರೀದಿಗಾಗಿ ₹2,76,639 ಸೇರಿದಂತೆ ಒಟ್ಟು ₹2,98,269 ವ್ಯಯಿಸಲಾಯಿಗಿದೆ. 252 ಮಾನವ ದಿನಗಳನ್ನು ಸೃಜಿಸಿ, ಅಭಿವೃದ್ಧಿ ಮಾಡಲಾಗಿದೆ.

‘ಶಾಖವಾದಿ ಗ್ರಾಮ ಪಂಚಾಯಿತಿಯ ಶಾಖವಾದಿ ಹಾಗೂ ಕೂಡ್ಲೂರು ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಯ ಎರಡು  ಕಾಮಗಾರಿಗಳನ್ನು ನರೇಗಾದಡಿ ಮಾಡಲಾಗಿದೆ. ಮುಕ್ತಿಧಾಮದಲ್ಲಿ ಶವಸಂಸ್ಕಾರಕ್ಕೆ ತೊಂದರೆ ಪಡುತ್ತಿದ್ದ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಿದೆ. ಇನ್ನುಳಿದಂತೆ ಪ್ರಸಕ್ತ ವರ್ಷದಲ್ಲಿ ಚಂದ್ರಬಂಡ, ಚಿಕ್ಕಸೂಗುರು, ಹಿರಾಪೂರ, ಜಂಬಲದಿನ್ನಿ, ಕಾಡ್ಲೂರು, ಕಲ್ಮಲಾ, ಕಮಲಾಪೂರ, ಎಲ್.ಕೆ.ದೊಡ್ಡಿ, ಉಡಮಗಲ್, ಯದ್ಲಾಪೂರ ಮತ್ತು ಯಾಪಲದಿನ್ನಿ ಗ್ರಾಮ ಪಂಚಾಯಿತಿಗಳಲ್ಲೂ ನರೇಗಾ ಯೋಜನೆಯಡಿ ಸ್ಮಶಾನ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ’ ಎಂದು ರಾಯಚೂರು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಪವಾರ ತಿಳಿಸಿದ್ದಾರೆ.

ನರೇಗಾ ಯೋಜನೆಯಡಿ ಸ್ಮಶಾನ ಅಭಿವೃದ್ಧಿ ಮಾಡಲಾಗಿದ್ದು ಸ್ಮಶಾನ ಜಾಗದಲ್ಲಿ ಅಂತಿಮ ಸಂಸ್ಕಾರ ಮಾಡಲು ನಮಗೆ ತುಂಬಾ ಅನುಕೂಲವಾಗಿದೆ ಮಲ್ಲೇಶ ಶಾಖವಾದಿ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT