ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಧಗೆ; ಕಲ್ಲಂಗಡಿ ವ್ಯಾಪಾರ ಬಲು ಜೋರು

Last Updated 22 ಫೆಬ್ರುವರಿ 2016, 6:46 IST
ಅಕ್ಷರ ಗಾತ್ರ

ತುಮಕೂರು: ಬೇಸಿಗೆ  ಧಗೆ ದಿನೇದಿನೇ ಹೆಚ್ಚಾಗುತ್ತಿದೆ. ತಂಪು ಪಾನಿಯ, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಕಳೆದ ವಾರದಿಂದ ತಾಪಮಾನ 30 ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ. ಬಿಸಿಲಿಗೆ ದೇಹವನ್ನು ತಂಪಾಗಿರಿಸುವ  ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ನಗರದ ವಿವಿಧ ಸ್ಥಳಗಳಲ್ಲಿ ಕಲ್ಲಂಗಡಿ ವ್ಯಾಪಾರ ಕಂಡು ಬರುತ್ತಿದೆ.

ನಗರದ ಭದ್ರಮ್ಮ ವೃತ್ತ, ಬಸ್‌ ನಿಲ್ದಾಣದ ರಸ್ತೆ, ಚಿಕ್ಕಪೇಟೆ, ಹೊರಪೇಟೆ, ಸದಾಶಿವ ನಗರ, ಅಮಾನಿಕೆರೆ ರಸ್ತೆ ಸೇರಿ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕಲ್ಲಂಗಡಿ ಹಣ್ಣು, ಕರಬೂಜ ಹಣ್ಣನ್ನು ಮಾರಲಾಗುತ್ತದೆ.

ಬಿಸಿಲು ಹೆಚ್ಚಾದಂತೆಲ್ಲ ಕಲ್ಲಂಗಡಿಯ ಬೆಲೆಯೂ ಹೆಚ್ಚಾಗುತ್ತಿದೆ. ಕಳೆದ ವಾರ ಕೆ.ಜಿ. ಗೆ ₹ 15 ಇದ್ದ ಬೆಲೆ ಈ ವಾರ  ₹ 20ರಂತೆ ಮಾರಾಟವಾಗುತ್ತಿದೆ. ಕತ್ತರಿಸಿಟ್ಟ ಹೋಳು ಕಲ್ಲಂಗಡಿ ₹ 10ಕ್ಕೆ ಮಾರಾಟ ಆಗುತ್ತಿದೆ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ಕೆ.ಜಿಗೆ ₹ 10ರಿಂದ 15 ಇರುತ್ತದೆ. ಈಗ ಬೆಲೆ ಹೆಚ್ಚಾದರೂ, ಖರೀದಿ ಮಾತ್ರ ಜೋರಾಗಿಯೇ ನಡೆದಿದೆ.

ಕಲ್ಲಂಗಡಿ ಹಣ್ಣಿನಲ್ಲಿ ಎರಡು ತಳಿಗಳು ಇವೆ. ಒಂದು ಕಿರಣ್‌, ಇನ್ನೊಂದು ನಾಮಧಾರಿ. ಕಿರಣ್ ತಳಿಗೆ ಬೇಡಿಕೆ  ಹಾಗೂ ಬೆಲೆ ಎರಡು ಹೆಚ್ಚು. ನಾಮಧಾರಿ ಹಣ್ಣು ರುಚಿಯಾದರು ಬೆಲೆ ಸ್ವಲ್ಪ ಕಡಿಮೆ ಎನ್ನುತ್ತಾರೆ ವ್ಯಾಪಾರಸ್ಥರು.

ನಾಮಧಾರಿ ಈ ಜಿಲ್ಲೆಯಲ್ಲೆ ಬೆಳೆದರೆ, ಕಿರಣ್‌ ತಳಿ ಕಲ್ಲಂಗಡಿ ಹಣ್ಣನ್ನು ಆಂಧ್ರ ಪ್ರದೇಶದಿಂದ ತರಲಾಗುತ್ತದೆ. ನಾಮಧಾರಿ ದೊಡ್ಡ ಹಣ್ಣು ಇದ್ದಷ್ಟು ಬೇಡಿಕೆ ಹೆಚ್ಚು. ಆದರೆ ಕಿರಣ್‌ ತಳಿ ಹಾಗಲ್ಲ. ಅದು ನೋಡಲು ಚಿಕ್ಕ ಗಾತ್ರ ಇದ್ದರೂ ವ್ಯಾಪಾರ ಮಾತ್ರ ಚೆನ್ನಾಗಿ ಆಗುತ್ತದೆ ಎನ್ನುತ್ತಾರೆ ಭದ್ರಮ್ಮ  ವೃತ್ತದಲ್ಲಿನ ಕಲ್ಲಂಗಡಿ ಹಣ್ಣು  ವ್ಯಾಪಾರಿ ಸೈಯದ್‌.

ಒಂಬತ್ತನೇ ವಯಸ್ಸಿನಿಂದಲೂ ಹಣ್ಣಿನ ವ್ಯಾಪಾರ ಮಾಡುತ್ತಿದ್ದೇನೆ. ಬೇರೆ ಸೀಸನ್‌ಗಳಲ್ಲಿ ಬೇರೆ ಹಣ್ಣ ಮಾರಾಟ ಮಾಡುತ್ತೇನೆ. ಈಗ ಕಲ್ಲಂಗಡಿ ಸೀಜನ್‌.  10 ದಿನಕ್ಮೊಮ್ಮೆ 6 ಕ್ವಿಂಟಲ್‌ ಹಣ್ಣು ತರುತ್ತೇನೆ. ಲಾಭ, ನಷ್ಟ ಯಾವುದನ್ನೂ ಲೆಕ್ಕ ಹಾಕಲು ಆಗುವುದಿಲ್ಲ. ಬದುಕಿಗೆ ಯಾವುದೇ ತೊಂದರೆ ಇಲ್ಲದೆ ಜೀವನ ಸಾಗುತ್ತದೆ ಎಂದು ತಿಳಿಸಿದರು. 

ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬರುತ್ತಿದ್ದರೂ ಸುಗ್ಗಿ ಈಗಷ್ಟೇ ಆರಂಭವಾಗಿದೆ. ಆವಕದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೆ ಬೇಡಿಕೆ ಹೆಚ್ಚಿದೆ. ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ಕಿರಣ್‌ ಕಲ್ಲಂಗಡಿ ಹಣ್ಣು ಚಿಕ್ಕದಾದರೂ ಹೆಚ್ಚು ಸಿಹಿ ಮತ್ತು ರುಚಿಯಾಗಿರುತ್ತದೆ. ಒಂದು ಹಣ್ಣು 2 ಕೆ.ಜಿ ಇರುವುದರಿಂದ ಮನೆಗೆ ಕೊಂಡೊಯ್ಯಲು ಅನುಕೂಲವಾಗಿರುತ್ತದೆ. ಮಕ್ಕಳು ಖುಷಿಪಟ್ಟು ತಿನ್ನುತ್ತಾರೆ. ಅಲ್ಲದೇ ಜೂಸ್‌ ಮಾಡಿಕೊಂಡು ಕುಡಿಯುತ್ತಾರೆ ಎಂದರು ಹಣ್ಣು ಖರೀದಿಗೆ ಬಂದಿದ್ದ ರಮೇಶ್‌.

ಗಾಳಿ ಹೆಚ್ಚಾಗಿರುವುದರಿಂದ ವ್ಯಾಪಾರ ಸ್ವಲ್ಪ ಕಡಿಮೆ ಇದೆ. ಮಾಘ ಮಾಸ ಕಳೆದು ಫಾಲ್ಗುಣ ಆರಂಭವಾದಂತೆ ಬಿಸಿಲ ಬೇಗೆ ಇನ್ನೂ ಹೆಚ್ಚುತ್ತದೆ. ಆಗ ಹಣ್ಣಿಗೆ ಇನ್ನು ಬೇಡಿಕೆ ಬರುತ್ತದೆ.
ಸಂಗಮೇಶ
ತಳ್ಳುಗಾಡಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT