ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ: ಬಹುಆಯ್ಕೆಯ ಪ್ರಶ್ನೆಗಳು

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ..
Published 5 ಜೂನ್ 2024, 19:54 IST
Last Updated 5 ಜೂನ್ 2024, 19:54 IST
ಅಕ್ಷರ ಗಾತ್ರ

1.  2022ರಲ್ಲಿ ಕೆಳಗಿನ ಯಾವ ರಾಜ್ಯಗಳಲ್ಲಿ ಸ್ವಾಭಾವಿಕವಾಗಿ ಉಂಟಾಗುವ ಮಳೆಗಿಂತ ಹೆಚ್ಚಿನ ಪ್ರಮಾಣದ ಮಳೆಯನ್ನು ಕಾಣಬಹುದಾಗಿದೆ ?

1. ಮಧ್ಯಪ್ರದೇಶ 2. ಗುಜರಾತ್

3. ರಾಜಸ್ಥಾನ 4. ಮಹಾರಾಷ್ಟ್ರ

5. ಪಶ್ಚಿಮ ಬಂಗಾಳ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2, 3 ಮತ್ತು 4 ಬಿ. 1, 2, 3, 4 ಮತ್ತು 5

ಸಿ. 2, 3 ಮತ್ತು 5 ಡಿ. 2 ಮತ್ತು 5

ಉತ್ತರ : ಎ

2. ಕೆಳಗಿನ ಯಾವ ಕಾರಣಗಳಿಂದ ಮುಂಗಾರಿನ ಪ್ರವೃತ್ತಿಯಲ್ಲಿ ಬದಲಾವಣೆಗಳನ್ನು ಕಾಣುವಂತಾಗಿದೆ ?

1.  ಲಾ ನೀನಾ ಸ್ಥಿತಿಗತಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತಿದೆ.

2.  ಹಿಂದೂ ಮಹಾಸಾಗರದ ಪೂರ್ವ ಭಾಗದಲ್ಲಿ ತಾಪಮಾನ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

3.  ಬಂಗಾಳಕೊಲ್ಲಿಯ ವಾಯುಭಾರ ಕುಸಿತ ದಕ್ಷಿಣ ಭಾಗಕ್ಕೆ ಹೆಚ್ಚಾಗಿ ಸಂಚರಿಸುತ್ತಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ   ಬಿ. 2 ಮಾತ್ರ

ಸಿ. 3 ಮಾತ್ರ ಡಿ. 1, 2 ಮತ್ತು 3

ಉತ್ತರ : ಡಿ

3. ಕೇಂದ್ರ ಚುನಾವಣಾ ಆಯೋಗ ಕೆಳಗಿನ ಯಾವ ಪ್ರದೇಶದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರ ನಿಬಂಧನೆಯಲ್ಲಿ ಬದಲಾವಣೆ ತಂದಿದೆ?

ಎ. ಜಮ್ಮು ಮತ್ತು ಉದಂಪುರ್ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.

ಬಿ. ಜಮ್ಮು ಮತ್ತು ಪುಲ್ವಾಮಾದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.

ಸಿ. ಉದಂಪೂರ್ ಮತ್ತು ಪುಲ್ವಾಮದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.

ಡಿ. ಉದಂಪುರ್ ಮತ್ತು ಶ್ರೀನಗರದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.

ಉತ್ತರ : ಎ

4.  ಸಿಯಾಚೆನ್ ಹಿಮನದಿಯನ್ನು ವಶಕ್ಕೆ ತೆಗೆದುಕೊಳ್ಳಲು ಭಾರತೀಯ ಸೇನೆ ಯಾವ ಕಾರ್ಯಾಚರಣೆಯನ್ನು ಕೈಗೊಂಡಿತು?

ಎ. ಮೇಘದೂತ್ ಕಾರ್ಯಾಚರಣೆ.

ಬಿ. ಮೇಘನಾಥ್ ಕಾರ್ಯಾಚರಣೆ.

ಸಿ. ಆದಿತ್ಯನಾಥ್ ಕಾರ್ಯಾಚರಣೆ.

ಡಿ. ಗೋಪಿನಾಥ್ ಕಾರ್ಯಾಚರಣೆ.

ಉತ್ತರ : ಎ

5. ನ್ಯಾಷನಲ್ ಜುಡಿಶಿಯಲ್ ಅಕಾಡೆಮಿ ಸಂಸ್ಥೆಯು ಕೆಳಗಿನ ಯಾವ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ?

ಎ. ಸುಪ್ರೀಂ ಕೋರ್ಟ್.

ಬಿ. ಕೇಂದ್ರ ಕಾನೂನು ಸಚಿವಾಲಯ.

ಸಿ. ಬಾರ್ ಕೌನ್ಸಿಲ್ ಆಫ್ ಇಂಡಿಯಾ.

ಡಿ. ಅಂತರರಾಷ್ಟ್ರೀಯ ನ್ಯಾಯಾಲಯ.

ಉತ್ತರ : ಎ

6.  ಹಾಕಿ ಇಂಡಿಯಾ ಪ್ರಶಸ್ತಿಗಳು-2023ಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಹಾಕಿ ಪುರುಷರ ವರ್ಷದ ಆಟಗಾರ ಪ್ರಶಸ್ತಿಯನ್ನು ಹಾರ್ದಿಕ ಸಿಂಗ್ ಅವರಿಗೆ ನೀಡಲಾಯಿತು.

2. ಹಾಕಿ ಮಹಿಳೆಯರ ವರ್ಷದ ಆಟಗಾರ್ತಿ ಪ್ರಶಸ್ತಿಯನ್ನು ಸಲೀಮಾ ಟೇಟೆ ಅವರಿಗೆ ನೀಡಲಾಯಿತು.

3.  ಹಾಕಿ ಇಂಡಿಯಾ ಜೀವಮಾನ ಸಾಧನೆ ಪ್ರಶಸ್ತಿಯನ್ನು ಅಶೋಕ್ ಕುಮಾರ್ ಅವರಿಗೆ ನೀಡಲಾಯಿತು.

ಕೋಡ್ ಬಳಸಿ, ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ  ಬಿ. 1, 2 ಮತ್ತು 3

ಸಿ. 1 ಮತ್ತು 2  ಡಿ. 2 ಮತ್ತು 3

ಉತ್ತರ : ಬಿ

7.  ಅಮೆರಿಕ ಮೂಲದ ಲೈಮ್ ಲೈಟ್ ನೆಟ್‌ವರ್ಕ್‌ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಕೆಳಗಿನ ಯಾವ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಆನ್‌ಲೈನ್‌ ಆಟಗಳ ವ್ಯಸನಿಗಳು ಕಂಡುಬರುತ್ತಾರೆ ?

ಎ. ದಕ್ಷಿಣ ಕೊರಿಯಾ ಮತ್ತು ಭಾರತ.

ಬಿ. ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ.

ಸಿ. ಭಾರತ ಮತ್ತು ಪಾಕಿಸ್ತಾನ.

ಡಿ. ಶ್ರೀಲಂಕಾ ಮತ್ತು ಪಾಕಿಸ್ತಾನ.

ಉತ್ತರ : ಎ

8.  ಇತ್ತೀಚೆಗೆ ಭಾರತದ ಯಾವ ಸಂಸ್ಥೆ 14 ವರ್ಷದ ಮಕ್ಕಳ ಆನ್‌ಲೈನ್‌ ಆಟದ ವ್ಯಸನಕ್ಕೆ ಸಂಬಂಧಪಟ್ಟಂತೆ ಸಮೀಕ್ಷೆಯನ್ನು ನಡೆಸಿದೆ?

ಎ. ನಿಮ್ಹಾನ್ಸ್

ಬಿ. ಅಖಿಲಭಾರತ ವೈದ್ಯಕೀಯ ಸಂಸ್ಥೆ.

ಸಿ.  ದಕ್ಷಿಣ ಭಾರತ ಮಾನಸಿಕ ಕಾಯಿಲೆಗಳ ವೈದ್ಯಕೀಯ ಸಂಸ್ಥೆ.

ಡಿ.  ನಾರಾಯಣ ಹೃದಯಾಲಯ.

ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT