ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಆ್ಯಸ್ಪೈರ್ ಲೀಡರ್ಸ್ ಪ್ರೋಗ್ರಾಂ

Published 9 ಜೂನ್ 2024, 19:37 IST
Last Updated 9 ಜೂನ್ 2024, 19:37 IST
ಅಕ್ಷರ ಗಾತ್ರ

ವಿವರ: ಜಾಗತಿಕ ಆ್ಯಸ್ಪೈರ್ ಲೀಡರ್ಸ್ ಯೋಜನೆಯು ಆಸ್ಪೈರ್ ಇನ್‌ಸ್ಟಿಟ್ಯೂಟ್ ನೀಡುವ ಸಂಪೂರ್ಣ ಧನಸಹಾಯದ 14 ವಾರಗಳ ಆನ್‌ಲೈನ್ ನಾಯಕತ್ವ ಯೋಜನೆಯಾಗಿದೆ.

ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲು ಮತ್ತು ಸುಸಜ್ಜಿತ ವೃತ್ತಿಪರರಾಗುವಂತೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಅರ್ಹತೆ: ಈ ಯೋಜನೆಯು 18 ರಿಂದ 29 ವಯೋಮಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ: ₹8,00,000ಕ್ಕಿಂತ ಕಡಿಮೆ ಇರಬೇಕು. ಕಳೆದ ಮೂರು ವರ್ಷಗಳಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ದಾಖಲಾದ ಅಥವಾ ಪೂರ್ಣಗೊಳಿಸಿದವರೂ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಇಂಗ್ಲಿಷ್‌ನಲ್ಲಿ ಮಧ್ಯಂತರ ಮಟ್ಟದ ಪ್ರಾವೀಣ್ಯವನ್ನು ಹೊಂದಿರಬೇಕು.

ಆರ್ಥಿಕ ಸಹಾಯ: ತರಬೇತಿ ಮಾಡ್ಯೂಲ್‌ಗಳಿಗೆ ಉಚಿತ ಪ್ರವೇಶ ಇರಲಿದೆ. ಜತೆಗೆ ಹಾವರ್ಡ್ ಅಧ್ಯಾಪಕರಿಂದ ಲೈವ್ ಸೆಷನ್‌ಗಳು ನಡೆಯುತ್ತವೆ.

ಅರ್ಜಿ ಸಲ್ಲಿಸಲು ಕೊನೆ ದಿನ:03-07-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/ALPS1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT