ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರ್ಸಿಂಗ್‌’ ನಂತರ ಮುಂದೇನು?: ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

Last Updated 2 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

* ಬಿ.ಎಸ್ಸಿ (ನರ್ಸಿಂಗ್)ಪದವಿ ನಂತರದ ಅವಕಾಶಗಳ ಕುರಿತು ಮಾಹಿತಿ ನೀಡಿ.
ಅಭಿಷೇಕ್ ಚವ್ಹಾಣ, ವಿಜಯಪುರ.
ಕೋವಿಡ್ ಪಿಡುಗಿನ ನಂತರ ನರ್ಸಿಂಗ್ ವೃತ್ತಿಗೆ ಬೇಡಿಕೆ ಹೆಚ್ಚಾಗಿದೆ. ಕೋರ್ಸ್ ಮುಗಿದ ನಂತರ ಈ ಕ್ಷೇತ್ರಗಳಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬಹುದು: ಆಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಆ್ಯಂಬುಲೆನ್ಸ್‌ ಸೇವೆಗಳು, ನರ್ಸಿಂಗ್ ಹೋಮ್‌ಗಳು, ನರ್ಸಿಂಗ್ ಕಾಲೇಜುಗಳು, ಆರೋಗ್ಯ ಸಂಬಂಧಿತ ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವೃದ್ದಾಶ್ರಮಗಳು, ಉದ್ದಿಮೆಗಳು, ಕೈಗಾರಿಕೆಗಳು, ಸಶಸ್ತ್ರ ಪಡೆಗಳು, ರೆಡ್ ಕ್ರಾಸ್ ಸೊಸೈಟಿ, ಎನ್‌ಜಿಒ ಸಂಸ್ಥೆಗಳು ಇತ್ಯಾದಿ. ಈ ವೃತ್ತಿಯಲ್ಲಿ ಯಶಸ್ವಿಯಾಗಲು ತಾಳ್ಮೆ, ಸೇವಾ ಮನೋಭಾವ, ಉತ್ತಮ ಸಂವಹನ, ಅಂತರ್-ವೈಯಕ್ತಿಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ವೃದ್ಯಾಪ್ಯ ವಿಜ್ಞಾನ (ಜೆರಿಯಾಟ್ರಿಕ್ ಸೈನ್ಸ್) ಕ್ಷೇತ್ರದಲ್ಲಿ ಮಾನವ ಸಂಪನ್ಮೂಲಕ್ಕೆ ಪೂರೈಕೆಗಿಂತಲೂ ಹೆಚ್ಚಿನ ಬೇಡಿಕೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT