ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೀಮ’ನ ಚಿತ್ರೀಕರಣ ಪೂರ್ಣ

Published 24 ಡಿಸೆಂಬರ್ 2023, 12:57 IST
Last Updated 24 ಡಿಸೆಂಬರ್ 2023, 12:57 IST
ಅಕ್ಷರ ಗಾತ್ರ

‘ಸಲಗ’ ಚಿತ್ರದ ಯಶಸ್ಸಿನ ಬಳಿಕ ‘ದುನಿಯಾ’ ವಿಜಯ್‌ ನಟಿಸಿ, ನಿರ್ದೇಶಿಸುತ್ತಿರುವ ‘ಭೀಮ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ‌ಮುಕ್ತಾಯವಾಗಿದೆ.

‘ಈ ಚಿತ್ರವು ನೈಜತೆಯಿಂದ ಕೂಡಿದೆ. ಊರ್ವಶಿ ಚಿತ್ರಮಂದಿರದ ಸುತ್ತಮುತ್ತ ಮಧ್ಯರಾತ್ರಿ ವೇಳೆ ಚಿತ್ರದ ಕೊನೆಯ ಭಾಗವನ್ನು ಚಿತ್ರೀಕರಿಸಲಾಗಿದೆ. ನಾಯಕ ಪೊಲೀಸರಿಂದ ಬಂಧನಗೊಳ್ಳುವ ಕ್ಲೈಮ್ಯಾಕ್ಸ್‌ ಭಾಗವನ್ನು ಇಲ್ಲಿ ಚಿತ್ರಿಕರಿಸಿದ್ದೇವೆ’ ಎಂದರು ವಿಜಯ್‌.

ನಿರ್ದೇಶಕ ವಿಜಯ್‌ ಇದೇ ವೇಳೆ ಕಾಲ್ನಡಿಗೆಯಲ್ಲಿ ಮಾಧ್ಯಮದವರಿಗೆ ಭೀಮನ ಚಟುವಟಿಕೆಗಳು ನಡೆಯುವ ಪ್ರದೇಶವನ್ನು ಪರಿಚಯಿಸಿಕೊಟ್ಟರು. ‘ನನ್ನ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸುವುದು ಖಚಿತ. ಆದರೆ ನೀವು ನಿರೀಕ್ಷಿಸಿದಂತೆ ಕಿರಿ ಮಗಳು ಮೋನಿಷಾ ಸದ್ಯ ಚಿತ್ರರಂಗಕ್ಕೆ ಬರುತ್ತಿಲ್ಲ. ಬದಲಿಗೆ ಹಿರಿಯ ಮಗಳು ಮೋನಿಕಾ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಅವಳು ಇತ್ತೀಚೆಗಷ್ಟೆ ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ನಟನೆ ತರಬೇತಿ ಮುಗಿಸಿ ಬಂದಿದ್ದಾಳೆ’ ಎಂದು ವಿಜಯ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT