ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನೇ ಹೀರೋ’ ಎಂದ ಉಪ್ಪಿ ಅಭಿಮಾನಿ

Published 22 ಫೆಬ್ರುವರಿ 2024, 19:25 IST
Last Updated 22 ಫೆಬ್ರುವರಿ 2024, 19:25 IST
ಅಕ್ಷರ ಗಾತ್ರ

ಇಲ್ಲೊಬ್ಬರು ‘ನಾನೇ ಹೀರೋ’ ಎಂದುಕೊಂಡು, ಉಪೇಂದ್ರ ರೀತಿಯದ್ದೇ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಅವರ ಅಭಿಮಾನಿಯಾಗಿರುವ ಹಗದೂರು ಅಶೋಕ್ ರೆಡ್ಡಿ ನಟನೆಯ ಈ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಆರ್.ಕೆ.ಗಾಂಧಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಬೃಂದಾ ವಿದ್ಯಾ ಪಿಕ್ಚರ್ಸ್‌ ನಿರ್ಮಿಸುತ್ತಿದೆ.

‘ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಚಿತ್ರವಿದು. ಉಪ್ಪಿ ಅಭಿಮಾನಿಯೊಬ್ಬ ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೊರಟು, ಅದಕ್ಕಾಗಿ ಏನೇನೆಲ್ಲ ಸಾಹಸ ಮಾಡುತ್ತಾನೆ ಎಂಬ ಕಥಾಹಂದರ ಈ ಚಿತ್ರದಲ್ಲಿದೆ’ ಎಂದರು ನಿರ್ದೇಶಕರು.

ಶೋಭ ಈ ಚಿತ್ರದ ನಾಯಕಿ. ಶೋಭರಾಜ್, ಶಶಿಕುಮಾರ್ ಮುಂತಾದವರು ನಟಿಸುತ್ತಿದ್ದಾರೆ. ಪ್ರಮೋದ್ ಭಾರತೀಯ ಛಾಯಾಚಿತ್ರಗ್ರಹಣ, ಎಂ. ಎಲ್. ರಾಜ ಸಂಗೀತ, ವಿನಯ್ ಸಂಕಲನ ಈ ಚಿತ್ರಕ್ಕಿದೆ. ಹೊಸಕೋಟೆ, ಚಿಂತಾಮಣಿ ಮತ್ತು ಗಾಂಧಿನಗರಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT