ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬರುತ್ತಿದ್ದಾನೆ ‘ಅಪ್ಪಾಜಿ’: ಓಂಪ್ರತಾಪ್‌ ಎಚ್‌. ನಿರ್ದೇಶನ

Published 18 ಏಪ್ರಿಲ್ 2024, 19:09 IST
Last Updated 18 ಏಪ್ರಿಲ್ 2024, 19:09 IST
ಅಕ್ಷರ ಗಾತ್ರ

ಮೂರು ದಶಕಗಳ ಹಿಂದೆ ವಿಷ್ಣುವರ್ಧನ್ ಅಭಿನಯದ ‘ಅಪ್ಪಾಜಿ’ ಸಿನಿಮಾ ತೆರೆಕಂಡು ಯಶಸ್ವಿಯಾಗಿತ್ತು. ಇದೀಗ ಅದೇ ಶೀರ್ಷಿಕೆಯ ಚಿತ್ರವೊಂದು ಸೆಟ್ಟೇರಿದೆ. ‘ಪ್ರೀತಿಗೆ ಕಡಲು ಕೋಪಕ್ಕೆ ಸಿಡಿಲು’ ಎಂಬ ಅಡಿಬರಹವಿದೆ.

ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಓಂಪ್ರತಾಪ್ ಎಚ್‌. ಈ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬಿ.ಚಂದಿರಧರ ಪಿನ್ನೇನಹಳ್ಳಿ ತಂದೆಯ ಪಾತ್ರಕ್ಕೆ ಬಣ್ಣ ಹಚ್ಚುವ ಜೊತೆಗೆ ಬಂಡವಾಳ ಹೂಡುತ್ತಿದ್ದಾರೆ.

‘ಮೊದಲು ‘ಜನಕ’ ಎಂಬ ಹೆಸರನ್ನು ಇಡಲಾಗಿತ್ತು. ಆದರೆ ಆ ಟೈಟಲ್‌ ಸಿಗಲಿಲ್ಲ. ಹೀಗಾಗಿ ‘ಅಪ್ಪಾಜಿ’ ಶೀರ್ಷಿಕೆಯಾಯ್ತು. ಅಪ್ಪನಾದವನು ಮಕ್ಕಳ ಮೇಲೆ ತೋರಿಸುವ ಪ್ರೀತಿ, ಆತನ ಜವಾಬ್ದಾರಿ ಮುಂತಾದ ಅಂಶಗಳು ಚಿತ್ರದಲ್ಲಿರಲಿದೆ. ಒಂದು ಹಂತದಲ್ಲಿ ತನಗಾದ ನೋವು, ಅನ್ಯಾಯಗಳನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಭಾವನಾತ್ಮಕವಾಗಿ ತೋರಿಸಲಾಗುತ್ತಿದೆ. ತುಮಕೂರು, ದಾಬಸ್‌ಪೇಟೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಆಲೋಚನೆಯಿದೆ’ ಎಂದರು ನಿರ್ದೇಶಕರು.

ಶ್ರೀವೆಂಕಿ ಚಿತ್ರದ ನಾಯಕ. ಪೂಜಾರಾಮ್ ನಾಯಕಿ. ತಾಯಿಯಾಗಿ ಭವ್ಯ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ನಾಗೇಂದ್ರ ಅರಸ್, ಮಹೇಶ್‌ ಸಿದ್ದು ಮುಂತಾದವರು ನಟಿಸುತ್ತಿದ್ದಾರೆ. ಆರು ಹಾಡುಗಳಿಗೆ ಕುಶಾಲ್‌ರಾಜ್ ಸಂಗೀತವಿದೆ. ಜಿ.ವಿ.ರಮೇಶ್-ಕೇಶವ್ ಛಾಯಾಚಿತ್ರಗ್ರಹಣ, ಮಹೇಶ್ ಸಂಕಲನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT