ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಟ್ಟೇರಿದ ‘ಕೃಷ್ಣಾ ನೀ ಬೇಗನೆ ಬಾರೋ’: ಭಾರ್ಗವ್‌ಗೆ ಜೋಡಿಯಾಗಿ ಊರ್ವಶಿ ಪರದೇಶಿ‌

Published 18 ಫೆಬ್ರುವರಿ 2024, 19:06 IST
Last Updated 18 ಫೆಬ್ರುವರಿ 2024, 19:06 IST
ಅಕ್ಷರ ಗಾತ್ರ

ವಿಷ್ಣುವರ್ಧನ್ ಅಭಿನಯದ ‘ಕೃಷ್ಣಾ ನೀ ಬೇಗನೆ ಬಾರೋ’ ಚಿತ್ರವು ಬಿಡುಗಡೆಗೊಂಡು ಸೂಪರ್‌ ಹಿಟ್ ಆಗಿತ್ತು. ಇದೀಗ ಅದೇ ಶೀರ್ಷಿಕೆ ಹೊಂದಿರುವ ಚಿತ್ರವೊಂದು ಸೆಟ್ಟೇರಿದೆ. ನಾಯಕ ಭಾರ್ಗವ್‌ ಬಿ.ವಿ ಅವರಿಗೆ ಜೋಡಿಯಾಗಿ ಊರ್ವಶಿ ಪರದೇಶಿ‌ ಕಾಣಿಸಿಕೊಂಡಿದ್ದಾರೆ. ಜಿ.ಸೂರ್ಯತೇಜ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಕೃಷ್ಣನೊಂದಿಗೆ ಗೋಪಿಕಾ ಸ್ತ್ರೀಯರು ಇರುತ್ತಾರೆ. ಯಾವ ಹುಡುಗಿಯನ್ನೂ ಹೊಂದಿರದ ಕಥೆಯ ನಾಯಕ ಕೃಷ್ಣನೊಂದಿಗೆ ನಾಲ್ಕು ಹುಡುಗೀರು ಹೇಗೆ ಕನೆಕ್ಟ್ ಆಗುತ್ತಾರೆ ಎಂಬುದೇ ಚಿತ್ರಕಥೆ. ಬೆಂಗಳೂರು, ಗೋವಾ, ಕೇರಳಗಳಲ್ಲಿ ಚಿತ್ರೀಕರಣ ಮಾಡುತ್ತೇವೆ. ಕನ್ನಡ,ತೆಲುಗು,ತಮಿಳು ಮತ್ತು ಭೋಜಪುರಿ ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳಲಿದೆ’ ಎಂದರು ನಿರ್ದೇಶಕರು. 

ಚೈತ್ರಾ, ಪ್ರಿಯಾಂಕ, ಆಶುರೆಡ್ಡಿ ಕೂಡ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಎಸ್.ನೀಲಕಂಠ ಮತ್ತು ಚಲಪತಿರಾಜು ಜಂಟಿಯಾಗಿ ನೀಲಕಂಠ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ತಾರಾ, ಅಚ್ಯುತಕುಮಾರ್, ಬಲರಾಜವಾಡಿ ಮುಂತಾದವರು ನಟಿಸುತ್ತಿದ್ದಾರೆ. ಆರ್ಯ ಅವರ ಛಾಯಾಚಿತ್ರಗಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT