ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಧಂಬರ್ದ ಪ್ರೇಮಕಥೆ ಸೇರಿ ಇಂದು ಐದು ಸಿನಿಮಾಗಳು ತೆರೆಗೆ

Published 30 ನವೆಂಬರ್ 2023, 22:22 IST
Last Updated 30 ನವೆಂಬರ್ 2023, 22:22 IST
ಅಕ್ಷರ ಗಾತ್ರ

ಅರ್ಧಂಬರ್ದ ಪ್ರೇಮಕಥೆ: ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಉರಡುಗ ಹಾಗೂ ಅರವಿಂದ್ ಕೆ.ಪಿ. ಜೋಡಿಯಾಗಿ ನಟಿಸಿರುವ ‘ಅರ್ದಂಬರ್ಧ ಪ್ರೇಮಕಥೆ’ ಇಂದು (ಡಿ.1) ತೆರೆ ಕಾಣುತ್ತಿದೆ. ‘ತುಘಲಕ್’ ಖ್ಯಾತಿಯ ಅರವಿಂದ್ ಕೌಶಿಕ್ ನಿರ್ದೇಶನದ ಚಿತ್ರವಿದು. ರ‍್ಯಾಪರ್ ಅಲೋಕ್, ಶ್ರೇಯಾಬಾಬು, ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸೂರ್ಯ ಅವರ ಛಾಯಾಗ್ರಹಣ, ಶಿವರಾಜ್ ಮೇಹು ಅವರ ಸಂಕಲನ ಈ ಚಿತ್ರಕ್ಕಿದೆ.

ಶೋಷಿತೆ: ಮಹಿಳೆಯರು ಎದುರಿಸುವ ಸವಾಲುಗಳೇ ಕಥೆಯಾಗಿರುವ ‘ಶೋಷಿತೆ’ ಚಿತ್ರ ಕೂಡ ಇಂದು ತೆರೆ ಕಾಣುತ್ತಿದೆ. ಬೆಂಗಳೂರು ಮೂಲದ ಎಂಜಿನಿಯರ್ ಶಶಿಧರ್ ಸಿನಿಮಾಕ್ಕೆ ಆ್ಯಕ್ಷನ್‌, ಕಟ್‌ ಹೇಳಿದ್ದಾರೆ.  ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿದ್ದ ಡಾ.ಜಾನ್ವಿರಾಯಲ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ ಖ್ಯಾತಿಯ ರೂಪಾ ರಾಯಪ್ಪ ಖಳನಾಯಕಿ ಪಾತ್ರದಲ್ಲಿದ್ದಾರೆ. ಕೆವಿನ್ ಎಂ. ಸಂಗೀತ, ರವಿವರ್ಮ ಕೆ. ಛಾಯಾಗ್ರಹಣ ಚಿತ್ರಕ್ಕಿದೆ. ‘ಎ ನೇಚರ್ ವ್ಯೂ ಔಟ್‌ಡೋರ್ ಕಾರ್ನಿವಲ್ ಪ್ರೊಡಕ್ಷನ್’ ಮೂಲಕ ಶಿರೀಷ ಅಲ್ಲಾ ನಿರ್ಮಾಣ ಮಾಡಿದ್ದಾರೆ.

ಅನಾವರಣ: ಪ್ರೀತಿ, ಭಾವುಕತೆಯ ಜೊತೆಗೆ ಸಸ್ಪೆನ್ಸ್ ಕಥೆಯುಳ್ಳ ಈ ಚಿತ್ರ ರಾಜ್ಯದಾದ್ಯಂತ ಬಿಡುಗಡೆಗೊಳ್ಳುತ್ತಿದೆ. ನಟ ಸುದೀಪ್‌ ಈ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ಹೊಸಬರ ತಂಡಕ್ಕೆ ಬೆಂಬಲ ನೀಡಿದ್ದರು. ರಾಮಚಂದ್ರ, ಅದ್ವೈತ್ ಪ್ರಭಾಕರ್ ನಿರ್ಮಾಣ ಮಾಡಿರುವ ಚಿತ್ರವನ್ನು ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದಾರೆ. ಪತ್ರಕರ್ತ ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ.

ರಾಂಚಿ: ರುದ್ರಾನಂದ ಆರ್.ಎನ್. ಹಾಗೂ ಅರುಣ್ ಕುಮಾರ್ ಎನ್. ನಿರ್ಮಾಣ‌ದಲ್ಲಿ ಶಶಿಕಾಂತ್ ಗಟ್ಟಿ ನಿರ್ದೇಶನದ ‘ರಾಂಚಿ’ ಇಂದು ತೆರೆ ಕಾಣುತ್ತಿದೆ. ಪ್ರಭು ಮುಂಡ್ಕರ್, ದಿವ್ಯ ಉರುಡುಗ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ಚಿತ್ರದಲ್ಲಿದ್ದಾರೆ. 

ಗಾರುಡಿಗ: ಹೊಸಬರ ‘ಗಾರುಡಿಗ’ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಡಾ.ಎಂ.ವೆಂಕಟಸ್ವಾಮಿ ಅವರು ಎಂ.ವಿ.ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ವಿಧಾ.ಆರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಾಗಡಿ ಮೂಲದ ರುದ್ವಿನ್ ನಾಯಕ. ನಾಯಕಿಯಾಗಿ ಮಾನಸ ಅಭಿನಯಿಸಿದ್ದಾರೆ. ಎಂ.ಸಂಜೀವ್‌ರಾವ್ ಸಂಗೀತ, ಅನಿರುದ್ಧ್-ಭರತ್ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಪೇಟೆ, ಆನೇಕಲ್, ಕನಕಪುರ, ಹಾರೋಹಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT