ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ವಿಚಾರಣೆ ಡಿ..20ಕ್ಕೆ ಮುಂದೂಡಿಕೆ

Last Updated 12 ಡಿಸೆಂಬರ್ 2022, 15:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹಾಗೂ ಪ್ರಮುಖ ಆರೋಪಿ ಸುಕೇಶ್‌ ಚಂದ್ರಶೇಖರ್‌ ವಿರುದ್ಧದ ₹200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಡಿ.20ಕ್ಕೆ ಮುಂದೂಡಿದೆ.

ಚಾರ್ಜ್‌ಶೀಟ್‌ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ವಿಶೇಷ ನ್ಯಾಯಾಧೀಶರಾದ ಶೈಲೇಂದ್ರ ಮಲ್ಲಿಕ್‌ ಅವರು ಇ.ಡಿ ಯಿಂದ ಇನ್ನೂ ಸಂಪೂರ್ಣವಾಗಿ ಪಡೆದಿಲ್ಲ ಎಂದು ಜಾಕ್ವೆಲಿನ್ ಪರ ವಕೀಲರು ವಾದದ ವೇಳೆ ಹೇಳಿದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.

ಆ.31ರಂದು ಜಾರಿ ನಿರ್ದೇಶನಾಲಯ ನೀಡಿದ್ದ ಪೂರಕ ಚಾರ್ಜ್‌ಶೀಟ್‌ನ್ನು ಇಟ್ಟುಕೊಂಡು ಕೋರ್ಟ್‌ ಜಾಕ್ವೆಲಿನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಹೀಗಾಗಿ ಸೋಮವಾರದ (ಡಿ.12) ವಿಚಾರಣೆಯಲ್ಲಿ ಅವರೂ ಕೂಡ ಹಾಜರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನಟಿಗೆ ನ.15ರಂದು ಜಾಮೀನು ನೀಡಿತ್ತು. ಆದರೆ ಈವರೆಗೂ ಅವರ ಬಂಧನವಾಗಿಲ್ಲ. ಮುಖ್ಯ ಸಂಗತಿಯೆಂದರೆ ಇಡಿ ಹಲವು ಬಾರಿ ವಿಚಾರಣೆಗೆ ಸಮನ್ಸ್‌ ನೀಡಿದ್ದು, ಪೂರಕ ಆರೋಪಿ ಪಟ್ಟಿಯಲ್ಲಿ ನಟಿಯನ್ನು ಆರೋಪಿ ಎಂದೇ ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT