ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 7ಕ್ಕೆ ‘ಜೋಗ್‌ 101’

Published 5 ಮಾರ್ಚ್ 2024, 5:09 IST
Last Updated 5 ಮಾರ್ಚ್ 2024, 5:09 IST
ಅಕ್ಷರ ಗಾತ್ರ

ಕಳೆದೊಂದು ವರ್ಷದಲ್ಲಿ ವಿಜಯ ರಾಘವೇಂದ್ರ ನಟನೆಯ ಸಾಲು ಸಾಲು ಸಿನಿಮಾಗಳು ತೆರೆಕಂಡಿವೆ. ಇದೀಗ ‘ಕೇಸ್‌ ಆಫ್‌ ಕೊಂಡಾಣ’ ಸಿನಿಮಾ ಬಳಿಕ ವಿಜಯ್‌ ನಟನೆಯ ‘ಜೋಗ್‌ 101’ ಸಿನಿಮಾ ಇದೇ ಗುರುವಾರ(ಮಾರ್ಚ್‌ 7) ಬಿಡುಗಡೆಯಾಗುತ್ತಿದೆ.     

ರಾಘು ಅವರ ಸೆವೆನ್ ಸ್ಟಾರ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವಿಜಯ್‌ ಕನ್ನಡಿಗ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದಲ್ಲಿ ಪ್ರೀತಿ, ಹಾಸ್ಯ ಸೇರಿದಂತೆ ಎಲ್ಲ ಅಂಶಗಳೂ ಇವೆ. ನನ್ನ ಚಿತ್ರಗಳಲ್ಲಿ ಒಂದೆರೆಡು ಹಿಟ್ ಹಾಡುಗಳು ಇರುತ್ತಿದ್ದವು. ಆದರೆ ಇತ್ತೀಚಿನ ನನ್ನ ಸಿನಿಮಾಗಳಲ್ಲಿ ಅಂತಹ ಹಿಟ್ ಹಾಡುಗಳು ಯಾವುದು ಇರಲಿಲ್ಲ. ‘ಜೋಗ್ 101’ ಚಿತ್ರದ ಹಾಡುಗಳು ಆ ಕೊರತೆಯನ್ನು ನೀಗಿಸಿವೆ. ಈ ಚಿತ್ರದಲ್ಲಿ ವಿಕ್ರಮ್‌ ಎಂಬ ಪಾತ್ರವನ್ನು ನಿಭಾಯಿಸಿದ್ದು, ಸುನೀತ್ ಹಲಗೇರಿ ಅವರ ಕ್ಯಾಮೆರಾ ಮೂಲಕ ಜೋಗವನ್ನು ನೋಡುವುದೇ ಅದ್ಭುತ’ ಎಂದರು ವಿಜಯ ರಾಘವೇಂದ್ರ. 

ಚಿತ್ರದಲ್ಲಿ ನಾಯಕಿಯಾಗಿ ತೇಜಸ್ವಿನಿ ನಟಿಸಿದ್ದು, ‘ದಿಶಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್ ಆರ್. ಬಾಸೂತ್ಕರ್ ಸಂಗೀತ ನಿರ್ದೇಶನ, ಸುನೀತ್ ಹಲಗೇರಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಥ್ರಿಲ್ಲರ್ ಮಂಜು ಸಾಹಸ ದೃಶ್ಯಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಗೋವಿಂದೇ ಗೌಡ, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT