ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್‌–ಅನಾಹಿತಾ ಪ್ರೇಮ್‌ಕಹಾನಿ

Published 9 ಮೇ 2024, 23:58 IST
Last Updated 9 ಮೇ 2024, 23:58 IST
ಅಕ್ಷರ ಗಾತ್ರ

ರಕ್ಷಿತ್‌ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಆಗಸ್ಟ್‌ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್‌ನಲ್ಲಿ ಸಿನಿಮಾ ತೆರೆಕಾಣಲಿದೆ.  

‘ಪಂಚತಂತ್ರ’ ಸಿನಿಮಾ ಖ್ಯಾತಿಯ ವಿಹಾನ್‌ ಹಾಗೂ ‘ನಮ್ಮನೆ ಯುವರಾಣಿ’ ಧಾರಾವಾಹಿ ಖ್ಯಾತಿಯ ಅಂಕಿತಾ ಅಮರ್‌ ‘ಸಿದ್‌–ಅನಾಹಿತ’ ಎಂಬ ಹೆಸರಿನಲ್ಲಿ ಈ ಸಿನಿಮಾದಲ್ಲಿ ಜೋಡಿಯಾಗಿದ್ದಾರೆ. ಪಾತ್ರಗಳ ವಿಶೇಷತೆ ಹೊತ್ತ ಪೋಸ್ಟರ್‌ಗಳನ್ನು ಚಿತ್ರದ ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಸಿದ್‌’ ಆ್ಯಂಗ್ರಿಯಂಗ್‌ ಮ್ಯಾನ್‌ ಆಗಿದ್ದು, ಕ್ರಿಕೆಟ್‌ ಈತನ ವೃತ್ತಿ. ಅತ್ತ ‘ಅನಾಹಿತ’ ನೀರಂತೆ ನಿಷ್ಕಲ್ಮಷೆ, ನಿರಂತರೆ. ಕವನಗಳಲ್ಲಿ ಮುಳುಗಿದಾಕೆ. ಅವಳೇ ಒಂದು ಕವಿತೆಯಂತೆ ಎಂದಿದ್ದಾರೆ ಚಂದ್ರಜಿತ್‌. ಇವರಿಬ್ಬರ ಕಾವ್ಯಾತ್ಮಕ ಪ್ರೇಮಕಥೆಯೇ ಚಿತ್ರದ ಕಥಾಹಂದರ. 

‘ಸಿನಿಮಾದಲ್ಲಿ ಹೆಚ್ಚಿನ ವಿಎಫ್‌ಎಕ್ಸ್‌ ಇದ್ದು, ಅದರ ಕೆಲಸಗಳು ನಡೆಯುತ್ತಿವೆ. ಜನ ಚುನಾವಣೆಯ ಮೂಡ್‌ನಿಂದ ಹೊರಬಂದ ಬಳಿಕ ಟ್ರೇಲರ್‌ ಬಿಡುಗಡೆ ಮಾಡಿ ರಿಲೀಸ್‌ ದಿನಾಂಕ ಘೋಷಣೆ ಮಾಡುತ್ತೇವೆ. ಇದನ್ನು ಹೊರತುಪಡಿಸಿ ಸದ್ಯ ಎರಡು ಸ್ಕ್ರಿಪ್ಟ್‌ಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ‘ಇಬ್ಬನಿ..’ಯ ಫಲಿತಾಂಶ ನೋಡಿಕೊಂಡು ಮುಂದಿನ ಹೆಜ್ಜೆ’ ಎನ್ನುತ್ತಾರೆ ಚಂದ್ರಜಿತ್‌.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT