ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂರನೇ ಕೃಷ್ಣಪ್ಪ’ನ ಟ್ರೇಲರ್‌ ಇಂದು

Published 10 ಮೇ 2024, 0:09 IST
Last Updated 10 ಮೇ 2024, 0:09 IST
ಅಕ್ಷರ ಗಾತ್ರ

ರಂಗಾಯಣ ರಘು ಹಾಗೂ ಸಂಪತ್‌ ಮುಖ್ಯಭೂಮಿಕೆಯಲ್ಲಿರುವ ‘ಮೂರನೇ ಕೃಷ್ಣಪ್ಪ’ ಚಿತ್ರವು ಮೇ 24ರಂದು ತೆರೆಕಾಣುತ್ತಿದ್ದು, ಸಿನಿಮಾದ ಟ್ರೇಲರ್‌ ಇಂದು(ಮೇ 10) ಬಿಡುಗಡೆಯಾಗಲಿದೆ.

ನವೀನ್‌ ನಾರಾಯಣಘಟ್ಟ ನಿರ್ದೇಶನದ ಈ ಚಿತ್ರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್‌ನ ನಾರಾಯಣಪುರ ಎಂಬಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಸಂಪೂರ್ಣವಾಗಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಭಾಷೆ ಬಳಕೆಯಾಗಿದೆ. ಚಿತ್ರದ ಟ್ರೇಲರ್‌ಗೆ ನಟ ಲೂಸ್‌ಮಾದ ಯೋಗಿ ಧ್ವನಿ ನೀಡಿದ್ದು, ಚಿತ್ರದ ಕಥೆಯನ್ನು ಸಂಕ್ಷಿಪ್ತವಾಗಿ ನಿರೂಪಣೆ ಮಾಡಿದ್ದಾರೆ. 

ಊರಲ್ಲಿ ‘ಕೃಷ್ಣಪ್ಪ’ ಹೆಸರಿನ ಮೂವರಿದ್ದು, ಅದರಲ್ಲಿ ನಟ ಸಂಪತ್‌ ‘ಮೂರನೇ ಕೃಷ್ಣಪ್ಪ’ನಿಗೆ ಬಣ್ಣಹಚ್ಚಿದ್ದಾರೆ. ಈ ‘ಕೃಷ್ಣಪ್ಪ’ನ ಜೀವನದ ಸುತ್ತ ಚಿತ್ರದ ಕಥೆಯಿದೆ. ‘ವೀರಣ್ಣ’ನಾಗಿ ರಂಗಾಯಣ ರಘು ಇಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಕಿರ’ ಮತ್ತು ‘ರಿಲ್ಯಾಕ್ಸ್​ ಸತ್ಯ’ ಸಿನಿಮಾ ನಿರ್ದೇಶಿಸಿದ್ದ ನವೀನ್‌ ಅವರ ಮೂರನೇ ಸಿನಿಮಾ ಇದಾಗಿದೆ. ಶ್ರೀಪ್ರಿಯಾ ನಾಯಕಿಯಾಗಿ ನಟಿಸಿದ್ದು, ಸಂತೋಷ್‌, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ.   

ಸಂಪತ್‌
ಸಂಪತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT