ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಪ್ರೇಮ ಕಥೆ

Published 14 ಫೆಬ್ರುವರಿ 2024, 23:30 IST
Last Updated 14 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ನಟ ಧರ್ಮಕೀರ್ತಿರಾಜ್‌, ಕಾವ್ಯ ಭಗವಂತ ಜೋಡಿಯಾಗಿ ನಟಿಸುತ್ತಿರುವ ‘ಯುಕೆ ಲವ್ ಸ್ಟೋರಿ’ ಚಿತ್ರ‌ ಇತ್ತೀಚೆಗಷ್ಟೇ ಸೆಟ್ಟೇರಿದೆ. ನಟ ಅಜಯ್‌ರಾವ್ ಪ್ರಥಮ ದೃಶ್ಯಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ವಿಜಯ್‌ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರೋಮನಾಸ್ ಕ್ರಿಯೇಶನ್ಸ್ ಅಡಿಯಲ್ಲಿ ಎಸ್.ಜೆ.ಸುರೇಶ್ ಆರೋಕ್ಯರಾಜ್ ಬಂಡವಾಳ ಹೂಡುತ್ತಿದ್ದಾರೆ. 

‘ಯುಕೆ ಎಂದರೆ ಉತ್ತರ ಕರ್ನಾಟಕ. ಆ ಭಾಗದಲ್ಲಿ ನಡೆಯುವ ರಗಡ್ ಪ್ರೀತಿಯ ಕಥೆಯಿದು. ಅಲ್ಲಿನ ಜನರ ಒಡನಾಟ, ಭಾಷೆ ತಿಳಿದುಕೊಂಡು, ಸುಮಾರು ಆರು ತಿಂಗಳುಗಳ ಕಾಲ ಅವರೊಂದಿಗಿದ್ದು ಚಿತ್ರಕಥೆ ಸಿದ್ದಪಡಿಸಿದ್ದೇನೆ. ಶಂಕರ್‌ನಾಗ್ ನನ್ನ ಸಿನಿಪಯಣಕ್ಕೆ ಆದರ್ಶ’ ಎಂದರು ನಿರ್ದೇಶಕರು.

ಒರಟು ಸ್ವಭಾವದ ಹಳ್ಳಿ ಹುಡುಗನಾಗಿ ಧರ್ಮ ಕೀರ್ತಿರಾಜ್ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ಬಲ ರಾಜವಾಡಿ, ಜಿ.ಜಿ.ಗೋವಿಂದೆಗೌಡ, ರವಿರೆಡ್ಡಿ, ಮಂಡ್ಯ ಸಿದ್ದು ಮುಂತಾದವರ ತಾರಾಬಳಗವಿದೆ. ಡಾ.ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿ.ಪಳನಿವೇಲು ಛಾಯಾಚಿತ್ರಗ್ರಹಣ, ಸಿ.ಕೆ.ಕುಮಾರ್ ಸಂಕಲನ ಚಿತ್ರಕ್ಕಿದೆ. ಕಲಬುರಗಿ, ಕೊಳ್ಳೇಗಾಲ, ಯಾದಗಿರಿ, ಹುಬ್ಬಳ್ಳಿ, ಬೆಳಗಾವಿ ಮೊದಲಾದೆಡೆ ಚಿತ್ರೀಕರಣ ನಡೆಸಲು ತಂಡ ಆಲೋಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT