ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿ ಸುದ್ದಿ: ನಿರ್ದೇಶನಕ್ಕಿಳಿದ ಕೌರವ ವೆಂಕಟೇಶ್

Published 21 ಜನವರಿ 2024, 20:55 IST
Last Updated 21 ಜನವರಿ 2024, 20:55 IST
ಅಕ್ಷರ ಗಾತ್ರ

ಖ್ಯಾತ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಆ್ಯಕ್ಷನ್‌–ಕಟ್‌ ಹೇಳಲು ಸಿದ್ಧರಾಗಿದ್ದಾರೆ. ಚಿತ್ರಕ್ಕೆ ‘ಕೊಕೇನ್’ ಎಂದು ಹೆಸರಿಡಲಾಗಿದ್ದು ಶೀಘ್ರದಲ್ಲಿ ಸೆಟ್ಟೇರಲಿದೆ.

‘‘ಬಿ.ಸಿ.ಪಾಟೀಲ್ ಅಭಿನಯದ ‘ಕೌರವ’ ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದೆ. ಇಲ್ಲಿಯವರೆಗೂ 1600ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದೇನೆ. ಈಗ ನನ್ನದೇ ಕಥೆಯೊಂದನ್ನು ನಿರ್ದೇಶನ ಮಾಡಲು ಹೊರಟಿರುವೆ. ಚಿತ್ರವು ದೇಶಪ್ರೇಮ ಸಾರುವ ಅಂಶಗಳನ್ನು ಒಳಗೊಂಡಿದೆ. ಮುಖ್ಯಂತ್ರಿ ಸಿದ್ದರಾಮಯ್ಯ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ’’ ಎನ್ನುತ್ತಾರೆ ವೆಂಕಟೇಶ್‌.

‘ಬಿಗ್‌ಬಾಸ್‌’ ಖ್ಯಾತಿಯ ಪ್ರಥಮ್‌ ಈ ಚಿತ್ರದ ನಾಯಕ. ಅಯೋಧ್ಯರಾಮ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ‘ನಾಯಕಿ ಹಾಗೂ ಉಳಿದ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ’ ಎಂದು ಚಿತ್ರತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT