ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಟಿ’ಯ ಮಾತು ಸೋತು...

Published 13 ಮೇ 2024, 16:44 IST
Last Updated 13 ಮೇ 2024, 16:44 IST
ಅಕ್ಷರ ಗಾತ್ರ

‘ಡಾಲಿ’ ಧನಂಜಯ ಅಭಿನಯದ ‘ಕೋಟಿ’ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಬಿಡುಗಡೆಯಾಗಿದೆ. ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ.

‘ಕೋಟಿ’ ಸಿನಿಮಾದ ಹಾಡುಗಳ ಹಕ್ಕನ್ನು ‘ಸರೆಗಮ’ ಖರೀದಿಸಿದೆ. ‘ಒಳ್ಳೆಯ ಹಾಡುಗಳನ್ನು ಬರೆಯುವವರ ಬಗ್ಗೆ ನನಗೆ ಒಂಥರಾ ಹೊಟ್ಟೆಕಿಚ್ಚು. ಹಾಗೆ ತಮ್ಮ ಹಾಡುಗಳ ಮೂಲಕ ಅತಿಹೆಚ್ಚು ಅಸಿಡಿಟಿ ಉಂಟುಮಾಡಿದ ಖ್ಯಾತಿ ಯೋಗರಾಜ್‌ ಭಟ್‌ ಅವರದು. ಅವರ ಹಾಡುಗಳ ದೊಡ್ಡ ಅಭಿಮಾನಿ ನಾನು. ‘ಕೋಟಿ’ ಸಿನಿಮಾದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿರೋದು ವಾಸುಕಿ. ಅವರು ಈ ಸಿನಿಮಾದ ಕತೆಯನ್ನು ಕನಿಷ್ಠ ಆರು ಸಲ ಕೇಳಿದ್ದಾರೆ! ಭಟ್ರ ಮನೆ, ನಮ್ಮನೆ ಹೀಗೆ ಹತ್ತಾರು ದಿನ ಒದ್ದಾಡಿ, ಸಿಕ್ಕ ಸಿಕ್ಕವರಿಗೆಲ್ಲಾ ಕಾಟ ಕೊಟ್ಟು ರಾತ್ರಿಯೆಲ್ಲಾ ಕುಳಿತು ಹಾಡಿನ ಕೆಲಸ ಮಾಡಿದ್ದು ಒಂಥರಾ ಖುಷಿ’ ಎಂದು ಈ ಹಾಡಿನ ಹುಟ್ಟಿನ ಬಗ್ಗೆ ನೆನಪಿಸಿಕೊಂಡಿದ್ದಾರೆ ನಿರ್ದೇಶಕ ಪರಮ್‌. 

‘ಕೋಟಿ’ ಚಿತ್ರದಲ್ಲಿ ಧನಂಜಯಗೆ ಜೋಡಿಯಾಗಿ ಮೋಕ್ಷಾ ಕುಶಾಲ್‌ ನಟಿಸಿದ್ದು, ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ‘777 ಚಾರ್ಲಿ’ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಸಿನಿಮಾ ಜೂನ್‌ 14ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT