ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ್ಸ್ಯಗಂಧ’ನಾದ ಪೃಥ್ವಿ

Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ಕೋಸ್ಟಲ್‌ವುಡ್‌ನಲ್ಲಿ ಮಿಂಚಿ ಚಂದನವನಕ್ಕೆ ಕಾಲಿಟ್ಟಿದ್ದ ನಟ ಪೃಥ್ವಿ ಅಂಬಾರ್‌ ಮತ್ತೆ ಕರಾವಳಿ ಮಣ್ಣಿಗೆ ಮರಳಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ಹಿನ್ನೆಲೆಯಲ್ಲಿ ನಡೆಯುವ ಕಥೆಯೊಂದನ್ನು ಹೊತ್ತ ‘ಮತ್ಸ್ಯಗಂಧ’ ಸಿನಿಮಾದಲ್ಲಿ ಪೃಥ್ವಿ ಪೊಲೀಸ್‌ ಅಧಿಕಾರಿಯಾಗಿ ಮಿಂಚಿದ್ದಾರೆ. 

ಚಿತ್ರದ ಫಸ್ಟ್‌ಲುಕ್‌ ಟೀಸರ್‌ ಇತ್ತೀಚೆಗೆ ತೆರೆಕಂಡಿದೆ. ‘ದಿಯಾ’ ಬಳಿಕ, ‘ಶುಗರ್‌ಲೆಸ್‌’, ‘ಬೈರಾಗಿ’, ‘ದೂರದರ್ಶನ’ ಸಿನಿಮಾಗಳಲ್ಲಿ ಪೃಥ್ವಿ ಮಿಂಚಿದ್ದರು. ಇವರ ನಟನೆಯ ‘ಫಾರ್‌ ರಿಜಿಸ್ಟ್ರೇಷನ್‌’, ‘ಜೂನಿ’, ‘ಭುವನಂ ಗಗನಂ’ ಇನ್ನಷ್ಟೇ ತೆರೆ ಕಾಣಬೇಕಿದೆ. ಜೊತೆಗೆ ‘ಮತ್ಸ್ಯಗಂಧ’ ಸಿನಿಮಾವೂ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಫೆ.23ರಂದು ತೆರೆಕಾಣಲಿದೆ. 

ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಬಿ.ಎಸ್ ವಿಶ್ವನಾಥ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡ ಪಿಚ್ಚರ್ ಅರ್ಪಿಸುವ ಈ ಸಿನಿಮಾವನ್ನು ದೇವರಾಜ್ ಪೂಜಾರಿ ನಿರ್ದೇಶಿಸಿದ್ದಾರೆ. ಇದು ದೇವರಾಜ್ ಪೂಜಾರಿ ಅವರ ನಿರ್ದೇಶನದ ಎರಡನೇ ಚಿತ್ರ. ದೇವರಾಜ್ ಈ ಹಿಂದೆ ‘ಕಿನಾರೆ’ ಅನ್ನುವ ಸಿನಿಮಾ ಮಾಡಿದ್ದರು. ‘ಮತ್ಸ್ಯಗಂಧ’ ಚಿತ್ರದ ಫಸ್ಟ್‌ಲುಕ್‌ ಟೀಸರ್‌ನಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಪೃಥ್ವಿ ಕಾಣಿಸಿಕೊಂಡಿದ್ದಾರೆ. ಲೋಕಿಸೌರವ್, ಪ್ರಶಾಂತ್ ಸಿದ್ಧಿ, ನಾಗರಾಜ್ ಬೈಂದೂರ್, ಶರತ್ ಲೋಹಿತಾಶ್ವ ಮೈಮ್ ರಾಮದಾಸ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT