ಮುಂಬೈ: ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್–ಕೆ‘ ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಪ್ರಭಾಸ್ ಮೊದಲ ಲುಕ್‌ನಲ್ಲಿ ಲೋಹದ ಕೋಟ್ (ಐರನ್ ಸೂಟ್) ತೊಟ್ಟು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ‘ಯಾರು ಕಥೆಯನ್ನು ಬದಲಾಯಿಸುತ್ತಾರೊ ಅವರೇ ಹಿರೋ‘ ಎಂಬ ಶೀರ್ಷಿಕೆಯಡಿ ಪೋಸ್ಟರ್ ಬಿಡುಗಡೆಯಾಗಿದೆ.
ಈ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿರುವ ದೀಪಿಕಾ ಅವರ ಮೊದಲ ಲುಕ್ ಮಂಗಳವಾರ ಬಿಡುಗಡೆಯಾಗಿದೆ.
ನಾಗ್ ಅಶ್ವಿನ್ ನಿರ್ದೇಶನ ಮಾಡಿರುವ ಪ್ರಾಜೆಕ್ಟ್– ಕೆ ಸಿನಿಮಾದಲ್ಲಿ, ನಟಿ ದೀಪಿಕಾ ಪಡುಕೋಣೆ , ಅಮಿತಾ ಬಚ್ಚನ್, ಕಮಲ್ ಹಾಸನ್ ಹಾಗೂ ದಿಶಾ ಪಟಾಣಿ ಸೇರಿದಂತೆ ಪ್ರಮುಖ ತಾರೆರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಅನೇಕ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
‘ಪ್ರಾಜೆಕ್ಟ್–ಕೆ‘ ಚಿತ್ರದ ಪೋಸ್ಟರ್ ಅನ್ನು ವೈಜಯಂತಿ ಮೂವೀಸ್ ನಿರ್ಮಾಣ ಸಂಸ್ಥೆ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ. ‘ನಾಯಕನ ಉದಯ ಇಲ್ಲಿಂದ ಆರಂಭ, ಈಗ ಕಥೆ ಬದಲಾಗಲಿದೆ‘ ಎಂದು ಬರೆದುಕೊಂಡಿದೆ.
ಅಮೆರಿಕದಲ್ಲಿ ಈ ಸಿನಿಮಾದ ಟೈಟಲ್ ಅನ್ನು ಇದೇ ಜುಲೈ 20ರಂದು ಚಿತ್ರತಂಡ ಬಹಿರಂಗಪಡಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.