ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾರ್ಲಿಂಗ್‌ ಕೃಷ್ಣನಿಗೆ ಅಮೃತಾ ಜೋಡಿ

Published 26 ಏಪ್ರಿಲ್ 2024, 18:48 IST
Last Updated 26 ಏಪ್ರಿಲ್ 2024, 18:48 IST
ಅಕ್ಷರ ಗಾತ್ರ

ಆರ್‌.ಚಂದ್ರು ನಿರ್ಮಾಣದ, ‘ಲವ್‌ ಮಾಕ್ಟೇಲ್‌’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ನಟನೆಯ ‘ಫಾದರ್‌’ ಸಿನಿಮಾದಲ್ಲಿ ನಾಯಕಿಯಾಗಿ ಅಮೃತಾ ಅಯ್ಯಂಗಾರ್‌ ನಟಿಸಲಿದ್ದಾರೆ. 

‘ಲವ್‌ ಮಾಕ್ಟೇಲ್‌’ ಸಿನಿಮಾದಲ್ಲಿ ‘ಜೋ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೃತಾ ಮತ್ತೊಮ್ಮೆ ಡಾರ್ಲಿಂಗ್‌ ಕೃಷ್ಣ ಅವರಿಗೆ ಜೋಡಿಯಾಗಲಿದ್ದಾರೆ. ಇದೇ ಪಾತ್ರ ಅಮೃತಗೆ ಸಿನಿಪಯಣದಲ್ಲಿ ಬ್ರೇಕ್ ನೀಡಿತ್ತು. ‘ಫಾದರ್‌’ ಸಿನಿಮಾದ ಮುಹೂರ್ತ ಶನಿವಾರ(ಏ.27) ನಡೆಯಲಿದ್ದು, ಬೆನ್ನಲ್ಲೇ ಚಿತ್ರೀಕರಣವೂ ಆರಂಭವಾಗಲಿದೆ. ಮುಹೂರ್ತ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ದಂಪತಿ ಮುಖ್ಯಅತಿಥಿಗಳಾಗಿರಲಿದ್ದಾರೆ. 

ರಾಜಮೋಹನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾದಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮುಖ್ಯಭೂಮಿಕೆಯಲ್ಲಿದ್ದು, ತೆಲುಗಿನ ಖ್ಯಾತ ನಟ ಸುನೀಲ್‌ ಕೂಡಾ ಬಣ್ಣಹಚ್ಚಲಿದ್ದಾರೆ. ಗೌರ ಹರಿ ಸಂಗೀತ ನಿರ್ದೇಶನ, ಸುಜ್ಞಾನ್‌ ಛಾಯಾಚಿತ್ರಗ್ರಹಣ, ರವಿ ವರ್ಮಾ ಹಾಗೂ ಚೇತನ್‌ ಡಿಸೋಜ ಸಾಹಸ ನಿರ್ದೇಶನ, ಮೋಹನ್‌ ಬಿ.ಕೆರೆ ಕಲಾನಿರ್ದೇಶನ ಚಿತ್ರಕ್ಕಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT