ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಚಿತ್ರದಲ್ಲಿಕನ್ನಡ ಕಲರವ

Last Updated 8 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಸಿನಿಮಾ ಕುರಿತು ಗಂಭೀರ ಅಧ್ಯಯನ ಮತ್ತು ಅನುಸಂಧಾನದ ಉದ್ದೇಶದಿಂದ ಆರಂಭಗೊಂಡ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಮೂರು ದಿನಗಳ ಕಾಲ ಕನ್ನಡದ ಕಲರವ ಕೇಳಿಬರಲಿದೆ. ಇದೇ 9ರಿಂದ 11ರವರೆಗೆ ಸುಚಿತ್ರದಲ್ಲಿ ಕನ್ನಡ ಚಿತ್ರೋತ್ಸವ ಆಯೋಜಿಸಲಾಗಿದ್ದು, ಒಂದು ವರ್ಷದ ಅವಧಿಯೊಳಗಿನ ಕನ್ನಡದ ಅತ್ಯುತ್ತಮ 8 ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.

ಸಿನಿಮಾ ತಜ್ಞರಾದ ಹರೀಶ್ ಮಲ್ಯ, ವೃಷಾಂಕ್ ಭಟ್ ಮತ್ತು ಬಿ.ಎಸ್. ಮನೋಹರ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಕಳೆದ ಅಕ್ಟೋಬರ್‌ನಿಂದ ಈ ವರ್ಷದ ಅ. 31ರವರೆಗಿನ ಸಿನಿಮಾಗಳಲ್ಲಿ ಅತ್ಯುತ್ತಮವಾದ 8 ಕನ್ನಡ ಸಿನಿಮಾಗಳನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಿದೆ. ಚಿತ್ರೋತ್ಸವದ ಉದ್ಘಾಟನೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ನೆರವೇರಿಸಲಿದ್ದು, ‘ಹೆಬ್ಬೆಟ್ ರಾಮಕ್ಕ’ ಉದ್ಘಾಟನಾ ಸಿನಿಮಾವಾಗಿ ಪ್ರದರ್ಶನವಾಗಲಿದೆ. ಮೂರು ದಿನಗಳ ಕನ್ನಡ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ದೀರ್ಘಕಾಲೀನ ಸಂವಾದವೂ ನಡೆಯಲಿರುವುದು ಚಿತ್ರೋತ್ಸವದ ವಿಶೇಷ.

‘ಸುಚಿತ್ರ ಕನ್ನಡ ಚಿತ್ರೋತ್ಸವಕ್ಕೆ ಕೋಲ್ಕತ್ತಾದ ಸತ್ಯಜಿತ್ ರೇ ಫಿಲಂ ಇನ್‌ಸ್ಟಿಟ್ಯೂಟ್‌ನ ಗೆಳೆಯ ರನ್ನು ಆಹ್ವಾನಿಸಲಾಗಿದೆ. ಇಲ್ಲಿನ ಸಿನಿಮಾಗಳಲ್ಲಿ ಒಂದಾದರೂ ಕೋಲ್ಕತ್ತಾ ಸಿನಿಮೋತ್ಸವಕ್ಕೆ ಆಯ್ಕೆ ಯಾಗಲಿ ಎನ್ನುವ ಆಸೆ ನಮ್ಮದು. ಈ ಮೂಲಕ ಸ್ಥಳೀಯ ಸಿನಿಮಾಗಳನ್ನು ಇತರ ಕಡೆ ಒಯ್ಯಲು ಅವಕಾಶವೊಂದನ್ನು ಸೃಷ್ಟಿಸಿ ದಂತಾಗುತ್ತದೆ’ ಎನ್ನುತ್ತಾರೆ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಬಿ. ಸುರೇಶ.

‘ಚಿತ್ರೋತ್ಸವದಲ್ಲಿ ನಡೆಯುವ ಸಂವಾದ ವನ್ನು ಪುಸ್ತಕ ರೂಪದಲ್ಲಿ ತರುವ ಉದ್ದೇಶವೂ ಸುಚಿತ್ರಕ್ಕಿದೆ. ಸುಚಿತ್ರದ ಚಟುವಟಿಕೆಗಳನ್ನು ಆರು ಬಗೆಯ ಉದ್ದೇಶಗಳಿಂದ ವಿಸ್ತರಿಸಲಾಗುತ್ತಿದೆ. ಸ್ಥಳೀಯ ಉದ್ಯಮದಲ್ಲಿರುವ ಸಿನಿಮಾ ತಯಾ ರಕರಿಗೆ ಪ್ರದರ್ಶನದ ಅವಕಾಶ ಕಲ್ಪಿಸುವುದು, ಸಿನಿಮಾ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡುವುದು. ಸಿನಿಮಾಸಕ್ತರಿಗೆ ವಿಶೇಷ ಕಾರ್ಯಾಗಾರ ಆಯೋಜಿಸುವುದು. ವರ್ಷ
ದುದ್ದಕ್ಕೂ 12 ಭಿನ್ನ ರೀತಿಯ ಕಾರ್ಯಾಗಾರ ಗಳನ್ನು ಮಾಡುವ ಮೂಲಕ ಹೊಸ ತಲೆಮಾರನ್ನು ಕನ್ನಡ ಸಿನಿಮಾ ಜಗತ್ತಿನೆಡೆಗೆ ಸೆಳೆಯುವ ಉದ್ದೇಶ ಸುಚಿತ್ರಕ್ಕಿದೆ’ ಎಂದು ತಮ್ಮ ಯೋಜನೆಗಳನ್ನು ಬಿಚ್ಚಿಡುತ್ತಾರೆ ಅವರು.

ಚಿತ್ರೋತ್ಸವದ ಪ್ರತಿನಿಧಿ ಶುಲ್ಕ ₹ 300

ಹೊಸ ತಲೆಮಾರಿಗೆ ಸಿನಿಮಾ ಸಂಸ್ಕೃತಿ ಪರಿಚಯ

ಸಿನಿಮಾಸಕ್ತರಿಗೆ ಮಾತ್ರವಲ್ಲದೇ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೂ ಸಿನಿಮಾ ಪ್ರದರ್ಶನವನ್ನೇರ್ಪಡಿಸುವ ಉದ್ದೇಶವನ್ನು ಸುಚಿತ್ರ ಹೊಂದಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ದೃಶ್ಯಭಾಷೆಯ ಪರಿಚಯ ಮಾಡಿಸಿ, ಸಿನಿಮೋದ್ಯಮದ ಕಡೆಗೆ ಆಸಕ್ತಿ ಹುಟ್ಟುಹಾಕುವ ಹಂಬಲ ಸುಚಿತ್ರದ್ದು. ಜಿಲ್ಲಾ ಕೇಂದ್ರಗಳಲ್ಲಿ ಸಿನಿಮಾ ನೋಡುವ ಬೃಹತ್ ಪ್ರೇಕ್ಷಕ ವರ್ಗವೇ ಇದೆ. ಆದರೆ, ಕೆಲ ಸಣ್ಣ ಊರುಗಳಲ್ಲಿ ಒಂದೂ ಸಿನಿಮಾ ಥಿಯೇಟರ್ ಇಲ್ಲದಿರುವ ಸ್ಥಿತಿಯೂ ಇದೆ. ಅಂಥ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಮಾಡುವ ಮೂಲಕ ಪ್ರೇಕ್ಷಕರನ್ನು ಕಾಪಿಟ್ಟುಕೊಂಡು ಸಿನಿಮಾ ಪ್ರೀತಿಯನ್ನು ಉಳಿಸಿಕೊಳ್ಳುವಂತೆ ಮಾಡುವ ಉದ್ದೇಶವಿದೆ. ಮುಖ್ಯವಾಗಿ ಕಾಲೇಜುಗಳಲ್ಲಿ ಸಿನಿಮಾ ಕ್ಲಬ್ ಸ್ಥಾಪಿಸುವ ಮೂಲಕ ಚಲನಚಿತ್ರ ರಸಗ್ರಹಣ, ವಿಮರ್ಶೆಯ ಕೌಶಲದೆಡೆಗೆ ವಿದ್ಯಾರ್ಥಿಗಳನ್ನು ಸೆಳೆಯಬೇಕಿದೆ. ಒಟ್ಟಾರೆ ಮುಂದಿನ ತಲೆಮಾರನ್ನು ಸಿನಿಮಾ ಸಂಸ್ಕೃತಿಗೆ ಸಜ್ಜುಗೊಳಿಸುವ ಕೆಲಸವನ್ನು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಮಾಡುವ ಉದ್ದೇಶ ಹೊಂದಿದೆ.

–ಬಿ. ಸುರೇಶ, ಅಧ್ಯಕ್ಷ, ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ

ಸುಚಿತ್ರ ಕನ್ನಡ ಕಿರುಚಿತ್ರೋತ್ಸವ

* ಉದ್ಘಾಟನೆ: ನಾಗತಿಹಳ್ಳಿ ಚಂದ್ರಶೇಖರ

* ಅತಿಥಿಗಳು: ಬಿ. ಸುರೇಶ, ನಂಜುಂಡೇಗೌಡ.

* ಆಯೋಜನೆ, ಸ್ಥಳ: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ,
ನಂ. 36, 9ನೇ ಮುಖ್ಯರಸ್ತೆ, ಬಿ.ವಿ.ಕಾರಂತ ರಸ್ತೆ, ಬನಶಂಕರಿ ಎರಡನೇ ಹಂತ. ಶುಕ್ರವಾರ ಸಂಜೆ 5

ಬಿ. ಸುರೇಶ
ಬಿ. ಸುರೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT