ಕಬೀರ್ ಖಾನ್ ನಿರ್ದೇಶನದ ’ಟ್ಯೂಬ್ಲೈಟ್’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವ ಜತೆಗೆ ಸಲ್ಮಾನ್ ಖಾನ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ನಿರೀಕ್ಷೆ ಹೊಂದಿದ್ದ ಸಿನಿಮಾ ಹಣ ಗಳಿಕೆಯಲ್ಲಿ ವಿಫಲವಾಗಿ ವಿತರಕರು ನಷ್ಟ ಅನುಭವಿಸಿದರು. ಚಿತ್ರದ ವಿತರಕರ ನಷ್ಟ ಭರಿಸುವುದಾಗಿ ಸಲ್ಮಾನ್ ಖಾನ್ ಭರವಸೆ ನೀಡಿದ್ದರು.