ಮುಂಬೈ: ಮಗಳು ಮಿಷಾ ಜತೆಗೆ ನೃತ್ಯ ಮಾಡಿರುವ ವಿಡಿಯೊ ಅನ್ನು ಬಾಲಿವುಡ್ ನಟ ಶಾಹಿದ್ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ಶನಿವಾರ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಮಗಳೆ ನಿನ್ನ ರಕ್ತದಲ್ಲೇ ನೃತ್ಯವಿದೆ’ ಎಂದು ಶಾಹಿದ್ #worlddanceday #havefeetwilldance #mj ಹ್ಯಾಷ್ಟ್ಯಾಗ್ ಜತೆಗೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೊ ಅನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.