ಮುಂಬೈ: ‘ತಾರಾಪಟ್ಟ ನಿರ್ವಹಿಸಲು ಪ್ರತಿಭೆ ಅವಶ್ಯ. ಆದರೆ, ಸಲ್ಮಾನ್ ಖಾನ್ ಹಾಗೂ ಶಾರುಕ್ ಖಾನ್ ಅವರಂತೆ ಸ್ಟಾರ್ಪಟ್ಟ ನಿಭಾಯಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ’ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಅನುಷ್ಕಾ ಶರ್ಮಾ, ಶಾರುಕ್ ಖಾನ್ ಅವರೊಂದಿಗೆ ‘ರಬ್ ನೆ ಬನಾ ದಿ ಜೋಡಿ’, ಅಮಿರ್ ಖಾನ್ ಅವರೊಂದಿಗೆ ‘ಪಿಕೆ’ ಹಾಗೂ ಸಲ್ಮಾನ್ ಖಾನ್ ಜತೆ ‘ಸುಲ್ತಾನ್’ ಚಿತ್ರಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು.
28 ವರ್ಷದ ನಟಿ ಅನುಷ್ಕಾ ಶರ್ಮಾ, ‘ಸ್ಟಾರ್ಪಟ್ಟದ ಬಗ್ಗೆ ನಾನು ಯೋಚಿಸಿ ಆತಂಕಕ್ಕೆ ಒಳಗಾಗಿದೆ. ಜತೆಗೆ, ಶಾರುಕ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಅವರಂತೆ ಸ್ಟಾರ್ಪಟ್ಟ ನನಗೆ ದೊರೆತಿಲ್ಲ. ಆದರೆ, ಸ್ಟಾರ್ಪಟ್ಟದಿಂದ ಕೆಲವೊಮ್ಮೆ ಕೆಟ್ಟ ಅನುಭವ ಪಡೆಯಬೇಕಾಗುತ್ತದೆ’ ಎಂದಿದ್ದಾರೆ.