‘ಸ್ಮಶಾನ ಕುರುಕ್ಷೇತ್ರಂ’ ರಂಗ ಪ್ರಯೋಗ

7

‘ಸ್ಮಶಾನ ಕುರುಕ್ಷೇತ್ರಂ’ ರಂಗ ಪ್ರಯೋಗ

Published:
Updated:
Deccan Herald

ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಕವಿ ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರಂ’ ನಾಟಕವನ್ನು ಇತ್ತೀಚೆಗೆ ಕಲಾಗ್ರಾಮದಲ್ಲಿ ಪ್ರದರ್ಶಿಸಿದರು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂ.ವಿ.ವಿ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್, ನಾಟಕಗಳು ಸಾರ್ವಕಾಲಿಕವಾದ ವೈಚಾರಿಕ ಪ್ರಜ್ಞೆಯನ್ನು ಒಳಗೊಂಡಂತಹ ಸಮುದಾಯದ ಧ್ವನಿಯನ್ನು ಎತ್ತರಕ್ಕೇರಿಸುತ್ತವೆ.   ಜನಪದದ ಮೂಲ ಆಶಯ ದೈವತ್ವವನ್ನು ಪ್ರಶ್ನಿಸುವ ಧೈರ್ಯವನ್ನು ಮಂಡಿಸುತ್ತವೆ. ರಂಗಭೂಮಿ ಚಲನಶೀಲತೆಯನ್ನು ಉಳಿಸಿಕೊಂಡಲ್ಲಿ ಆರೋಗ್ಯ ಪೂರ್ಣ ಸಮಾಜ ಸಾಧ್ಯವಾಗುತ್ತದೆ ಎಂದರು.

ವಿ.ವಿಯ ಕುಲಸಚಿವ ಡಾ. ಬಿ.ಕೆ.ರವಿ, ಪ್ರದರ್ಶನ ಕಲಾ ವಿಭಾಗವು ಕ್ರೀಯಾಶಿಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಎನ್.ಎಸ್.ಡಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿದರು. ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ, ವಿಭಾಗದ ಮುಖ್ಯಸ್ಥರಾದ ಡಾ.ಕೆ.ರಾಮಕೃಷ್ಣಯ್ಯ, ನಿವೃತ್ತ ಪ್ರಾಧ್ಯಾಪಕರಾದ ಕೆ.ಆರ್.ಸುದೀಂದ್ರಶರ್ಮ, ಅತಿಥಿ ಉಪನ್ಯಾಸಕರಾದ ಡಾ.ಜನಾರ್ಧನ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !