ಮುಂಬೈ: ರಂಗಭೂಮಿಯ ಪ್ರಮುಖ ನಟ ಹಾಗೂ ಹಲವು ಚಲನಚಿತ್ರ, ಕಿರುತೆರೆ ಕಾರ್ಯಕ್ರಮಗಳಲ್ಲಿಯೂ ನಟಿಸಿದ್ದ ಹಿರಿಯ ನಟ ವಿಶ್ವಮೋಹನ್ ಬಡೋಲಾ ನಿಧನರಾದರು. ಅವರಿಗೆ 84 ವರ್ಷವಾಗಿತ್ತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ನಿವಾಸದಲ್ಲಿಯೇ ಸೋಮವಾರ ರಾತ್ರಿ ನಿಧನರಾದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮೃತರ ಪುತ್ರ ಕಿರುತೆರೆ ನಟ ವರುಣ್ ಬಡೋಲಾ ಅವರು, ಇನ್ಸ್ಟಾಗ್ರಾಂಪೋಸ್ಟ್ ಮೂಲಕ ತಮ್ಮ ತಂದೆ ನಿಧನರಾಗಿರುವುದನ್ನು ದೃಢಪಡಿಸಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರೂ ಇದ್ದಾರೆ.

ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಅವರು, ನಂತರ ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರದತ್ತ ಹೊರಳಿದರು. ಐದು ದಶಕಗಳ ವೃತ್ತಿಬದುಕಿನಲ್ಲಿ ಅವರು ಆಕಾಶವಾಣಿಗಾಗಿ 400ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಅಶುತೋಷ್ ಗೌರಿಕರ್ ಅವರ ‘ಸ್ವದೇಶ್’, ‘ಜೋಧಾ ಅಕ್ಬರ್’, ‘ಲಗೇ ರಹೋ ಮುನ್ನಾಭಾಯ್’ ಒಳಗೊಂಡು ಅನೇಕ ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.