ಖಾರದ ಪೊಂಗಲ್
ಬೇಕಾಗುವ ಸಾಮಾನು: ಹೆಸರು ಬೇಳೆ ಒಂದು ಕಪ್, ಅಕ್ಕಿ ಒಂದು ಕಪ್, ಕಾಯಿತುರಿ ಒಂದು ಕಪ್, ಜೀರಿಗೆ, ಅರಿಸಿಣ, ಮೆಣಸು, ಇಂಗು, ಹಸಿಮೆಣಸಿನಕಾಯಿ, ಎಣ್ಣೆ ಅಥವಾ ತುಪ್ಪ, ಚಿದಕವರೆ, ಉಪ್ಪು.
ಮಾಡುವ ವಿಧಾನ: ಹೆಸರು ಬೇಳೆಯನ್ನು ಹುರಿದು ಅಕ್ಕಿಯೊಂದಿಗೆ ಸೇರಿಸಿ ಅನ್ನ ಮಾಡಿಕೊಳ್ಳಿ. ಮೆಣಸು, ಜೀರಿಗೆಯನ್ನು ಪುಡಿ ಮಾಡಿ ಅನ್ನಕ್ಕೆ ಸೇರಿಸಿ. ಕಾಯಿತುರಿ, ತುಪ್ಪ, ಉಪ್ಪು ಸೇರಿಸಿ ಒಂದೆರಡು ಸುತ್ತು ಕೂಡಿಸಿ. ನಂತರ ಬೆಂದ ಚಿದಕವರೆ ಸೇರಿಸಿಡಿ.