ವಿದೇಶಿ ಹಣ: ಕೊಲ್ಲಿ ದೇಶಗಳಿಂದಲೇ ಸಿಂಹಪಾಲು

7

ವಿದೇಶಿ ಹಣ: ಕೊಲ್ಲಿ ದೇಶಗಳಿಂದಲೇ ಸಿಂಹಪಾಲು

Published:
Updated:
Deccan Herald

ವಿಶ್ವದ ಎಲ್ಲೆಡೆ ಇರುವ ಅನಿವಾಸಿ ಭಾರತೀಯರು ಇಲ್ಲಿಗೆ ಕಳುಹಿಸುವ ಹಣದಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಭಾರತೀಯ ಕಾರ್ಮಿಕರೇ ಕಳುಹಿಸುತ್ತಾರೆ.

2012ರಿಂದ 2017ರವರೆಗೆ ಕೊಲ್ಲಿಯಲ್ಲಿರುವ ಭಾರತೀಯ ಕಾರ್ಮಿಕರು ₹ 15 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಭಾರತಕ್ಕೆ ಕಳುಹಿಸಿದ್ದಾರೆ.

ಆದರೆ ಇದೇ ಅವಧಿಯಲ್ಲಿ 24,000ಕ್ಕೂ ಹೆಚ್ಚು ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿ ಮೃತಪಟ್ಟಿದ್ದಾರೆ. ಸರ್ಕಾರವೇ ಲೋಕಸಭೆಗೆ ನೀಡಿದ ಮಾಹಿತಿ ಮತ್ತು ವೆಂಕಟೇಶ್ ನಾಯಕ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ

**

ತಜ್ಞರ ಅಭಿಮತ

* ಬಾಂಗ್ಲಾದೇಶ ಮತ್ತು ವಿಯೆಟ್ನಾಂನ ಕಾರ್ಮಿಕರು ಭಾರತೀಯರಿಗಿಂತ ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ. ಹೀಗಾಗಿ ಭಾರತೀಯರಿಗೆ ಉದ್ಯೋಗದಲ್ಲಿ ಪೈಪೋಟಿ ಹೆಚ್ಚುತ್ತಿದೆ

* ಕಂಪನಿಗಳು ಆರೋಗ್ಯ ವಿಮೆ ಒದಗಿಸದಿದ್ದರೂ ಬಾಂಗ್ಲಾ, ವಿಯೆಟ್ನಾಂ ಕಾರ್ಮಿಕರು ದುಡಿಯುತ್ತಾರೆ. ಇದರ ಪರಿಣಾಮವಾಗಿ ಬಹುತೇಕ ಕಂಪನಿಗಳು ಭಾರತೀಯ ಕಾರ್ಮಿಕರಿಗೆ ಒದಗಿಸುತ್ತಿದ್ದ ಆರೋಗ್ಯ ವಿಮೆ ಸೌಲಭ್ಯದಲ್ಲಿ ಕಡಿತ ಮಾಡಿವೆ ಇಲ್ಲವೇ ರದ್ದು ಮಾಡಿವೆ

* ಪಾಶ್ಚಿಮಾತ್ಯ ದೇಶಗಳ ಕಾರ್ಮಿಕರಿಗೆ ಅವರ ದೇಶಗಳೇ ವಿದೇಶದಲ್ಲೂ ಆರೋಗ್ಯ ವಿಮೆ ಒದಗಿಸುತ್ತಿವೆ. ಆದರೆ ಭಾರತೀಯರಿಗೆ ವಿದೇಶದಲ್ಲಿ ಆ ಸೌಲಭ್ಯ ಇಲ್ಲ. ಅಲ್ಲದೆ ಭಾರತ ಸರ್ಕಾರವು ಈ ಕಾರ್ಮಿಕರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಯನ್ನೂ ಒದಗಿಸುವುದಿಲ್ಲ

* ಕೊಲ್ಲಿ ರಾಷ್ಟ್ರಗಳಲ್ಲಿ ಮೃತಪಟ್ಟ ಭಾರತೀಯರ ಶವಗಳನ್ನು ಭಾರತಕ್ಕೆ ತರುವಲ್ಲಿ ಬಹಳ ವಿಳಂಬವಾಗುತ್ತಿದೆ. ರಾಯಭಾರ ಕಚೇರಿಗಳು ಚುರುಕಾಗಿ ಇಲ್ಲದಿರುವುದೇ ವಿಳಂಬಕ್ಕೆ ಕಾರಣ. ಆದರೆ ಅಲ್ಲಿನ ಭಾರತೀಯ ಕಾರ್ಮಿಕರ ಸಂಘಟನೆಗಳು ಈ ವಿಚಾರದಲ್ಲಿ ಮೃತರ ಕುಟುಂಬಕ್ಕೆ ನೆರವಾಗುತ್ತಿವೆ

**

‘ಕಾರ್ಮಿಕ ಕಾನೂನುಗಳೇ ಇಲ್ಲ’

‘ಕೊಲ್ಲಿ ರಾಷ್ಟ್ರಗಳಲ್ಲಿ ಮೊದಲಿದ್ದ ಹಾಗೆ ಉತ್ತಮ ಔದ್ಯೋಗಿಕ ವಾತಾವರಣ ಈಗ ಇಲ್ಲ. ಅಲ್ಲಿ ಕಾರ್ಮಿಕರ ಕುಂದುಕೊರತೆ ಪರಿಹಾರ ವ್ಯವಸ್ಥೆ, ಕಾರ್ಮಿಕ ಹಕ್ಕುಗಳು ಅಸ್ತಿತ್ವದಲ್ಲಿಲ್ಲ. ಆ ರಾಷ್ಟ್ರಗಳು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ.

ಅಲ್ಲಿನ ವಾತಾವರಣ ಮತ್ತು ಅತ್ಯಂತ ಒತ್ತಡದಿಂದ ಕೂಡಿದ ಔದ್ಯೋಗಿಕ ವಾತಾವರಣದಿಂದ ನಮ್ಮ ಕಾರ್ಮಿಕರ ಆರೋಗ್ಯ ಕ್ಷೀಣಿಸುತ್ತಿದೆ’ ಎಂದು ಕೇರಳ ನಾಗರಿಕ ಸೇವಾ ಆಯೋಗದ ಸದಸ್ಯ ಜಿನು ಉಮ್ಮನ್‌ ಅಭಿಪ್ರಾಯಪಟ್ಟಿದ್ದಾರೆ.

‘ಈ ಸಮಸ್ಯೆಗಳನ್ನು ಪರಿಹರಿಸಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಭಾರತೀಯರು ಭಾರತದ ಎಲ್ಲೆಯನ್ನು ಬಿಟ್ಟುಹೋಗುತ್ತಿದ್ದಂತೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಕೇಂದ್ರ ಸರ್ಕಾರ ಭಾವಿಸಿದಂತಿದೆ’ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !