ಚಾಮರಾಜನಗರ: ‘ದರ್ಬಾರ್‘ ಗಣಪತಿ ಪ್ರತಿಷ್ಠಾಪನೆ, ಹಬ್ಬದ ಸಡಗರ

7

ಚಾಮರಾಜನಗರ: ‘ದರ್ಬಾರ್‘ ಗಣಪತಿ ಪ್ರತಿಷ್ಠಾಪನೆ, ಹಬ್ಬದ ಸಡಗರ

Published:
Updated:
Deccan Herald

ಚಾಮರಾಜನಗರ: ಮಹಿಳೆಯರು, ಚಿಣ್ಣರು ಸೇರಿದಂತೆ ಪಟ್ಟಣ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಜನರು ಗುರುವಾರ ಸಡಗರದಿಂದ ಗಣೇಶನ ಹಬ್ಬ ಆಚರಿಸಿದರು.

ಗಣೇಶನ ದೇವಾಲಯಗಳಲ್ಲಿ ವಿಘ್ನ ನಿವಾರಕನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪಟ್ಟಣದ ಬೀದಿಗಳಲ್ಲಿ ವಿವಿಧ ಸಂಘಟನೆಗಳು ಗಣಪನ ದೊಡ್ಡ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ, ಮನೆ ಮನೆಗಳಲ್ಲಿ ಜನರು ಗಣೇಶನ ಚಿಕ್ಕ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜಿಸಿದರು. ಗಣೇಶನಿಗೆ ಪ್ರಿಯವಾದ ಕಡುಬು ಸೇರಿದಂತೆ ಸಿಹಿ ಭಕ್ಷ್ಯ, ಹಣ್ಣು–ಹಂಪಲುಗಳನ್ನು ಇಟ್ಟು ನೈವೇದ್ಯ ಮಾಡಲಾಯಿತು.

ಹಬ್ಬದ ಪ್ರಯುಕ್ತ ಮನೆಗಳು, ಬೀದಿ, ಅಂಗಡಿಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮನೆಗಳ ಮುಂಭಾಗದಲ್ಲಿ ವಿವಿಧ ಬಣ್ಣಗಳಿಂದ ಬಿಡಿಸಲಾಗಿದ್ದ ತರಹೇವಾರಿ ರಂಗೋಲಿಗಳು ಹಬ್ಬಕ್ಕೆ ಇನ್ನಷ್ಟು ಮೆರುಗು ತಂದಿತ್ತು.

ಬೀದಿಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಚಪ್ಪರಗಳನ್ನು ಹಾಕಿ, ವಿವಿಧ ಅಲಂಕಾರಿಕ ವಸ್ತು, ವಿದ್ಯುತ್‌ ದೀಪಗಳಿಂದ ಶೃಂಗರಿಸಲಾಗಿತ್ತು. 

ನೆಂಟರಿಷ್ಟರು, ನೆರೆಹೊರೆಯರು ಮನೆ ಮನೆಗೆ ತೆರಳಿ, ಪೂಜೆಯಲ್ಲಿ ಪಾಲ್ಗೊಂಡು ಸಿಹಿ ತಿಂಡಿ ವಿನಿಮಯ ಮಾಡಿಕೊಂಡರು. ಮಕ್ಕಳು ಹಾಗೂ ಮಹಿಳೆಯರು ಹೊಸ ಉಡುಗೆ ತೊಟ್ಟು ಸಂಭ್ರಮಿಸಿದರು.

ಕೆಲವು ಮನೆಗಳಲ್ಲಿ ಬೆಳಿಗ್ಗೆ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು ರಾತ್ರಿಯೇ ವಿಸರ್ಜನೆ ಮಾಡಲಾಯಿತು. 

ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಧ್ವನಿವರ್ಧಕಗಳು ಜನರಿಗೆ ಸ್ವಲ್ಪ ಮಟ್ಟಿನ ಕಿರಿ ಕಿರಿ ಉಂಟು ಮಾಡಿದವು.

ಗ್ರಾಮೀಣ ಭಾಗದಲ್ಲೂ ಸಂಭ್ರಮ: ಗ್ರಾಮೀಣ ಪ್ರದೇಶಗಳಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮುಖ್ಯ ರಸ್ತೆಯ ಬೀದಿಗಳಲ್ಲಿ ಗಣೇಶನಿಗೆ ಸಂಬಂಧಿಸಿದ ಹಾಡು ಹಾಗೂ ಸಿನಿಮಾ ಹಾಡುಗಳು  ಧ್ವನಿವರ್ಧಕಗಳ ಮೂಲಕ ಕಿವಿಗೆ ಅಪ್ಪಳಿಸುತ್ತಿತ್ತು.

‘ದರ್ಬಾರ್‘ ಗಣಪತಿ ಪ್ರತಿಷ್ಠಾಪನೆ: ಪಟ್ಟಣದ ಗುರುನಂಜಶೆಟ್ಟರ ಛತ್ರದ ಮುಂಭಾಗ ಶ್ರೀ ವಿದ್ಯಾಗಣಪತಿ ಮಂಡಳಿಯಿಂದ ಗುರುವಾರ ಮಧ್ಯಾಹ್ನ 1.15ಕ್ಕೆ ‘ದರ್ಬಾರ್’ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !