ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ‍ಅಭೀಷ್ಟಗಳು ನೆರವೇರುವವು
Published 10 ಜುಲೈ 2024, 0:28 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅತ್ಯಂತ ಸಣ್ಣ ವಯಸ್ಸಿಗೆ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರ ಬೇಕಾದಂಥ ಸಂದರ್ಭ ಬರುತ್ತದೆ. ವಯಸ್ಸಿಗೆ ಮೀರಿದ ಗಾಂಭೀರ್ಯವನ್ನು ಹೊಗಳುವವರು ಕೆಲವರಾದರೆ ತೆಗಳುವವರು ಕೆಲವರಿರುತ್ತಾರೆ.
ವೃಷಭ
ಹಲವು ದಿನಗಳ ಪ್ರತೀಕ್ಷೆಯ ಮನೋಭಿಲಾಷೆ ಪೂರ್ಣಗೊಳ್ಳುವ ದಿನ ಇದಾಗಲಿದೆ. ತೋಟದ ಫಸಲಿನಲ್ಲಿ ಮಹತ್ತರ ಬದಲಾವಣೆ ತರುವ ಉಪಾಯ ಮಾಡುವಿರಿ. ಮೀನು ಮಾರಾಟಗಾರರಿಗೆ ಲಾಭ.
ಮಿಥುನ
ತಾಳೆಪತ್ರಗಳ ಅಧ್ಯಯನ ನಡೆಸಬೇಕೆಂದು ಇರುವವರಿಗೆ ಸ್ಥಳ ಸಿಗುತ್ತದೆ. ಅಕ್ಕ ತಂಗಿಯರ ಆಸೆ ಈಡೇರಿಸುವ ಪ್ರಯತ್ನ ನಿಮ್ಮದಾಗುವುದು. ಮಕ್ಕಳ ಹೆಸರಿನಲ್ಲಿ ನಿವೇಶನ ಖರೀದಿಸುವ ಯೋಚನೆಗಳು ಬರಲಿವೆ.
ಕರ್ಕಾಟಕ
ಮನೆಯಲ್ಲಿ ಮಾಡುವ ಅಡುಗೆ ಹೊರತುಪಡಿಸಿ ಬೇರೆಯ ಆಹಾರ ತಿನ್ನುವ ಮನಸ್ಸಾಗುತ್ತದೆ. ಕೃತಜ್ಞತೆ ವ್ಯಕ್ತಪಡಿಸದ ವ್ಯಕ್ತಿಗಳ ಜತೆ ವ್ಯವಹಾರ ನಡೆಸುವುದು ಬೇಡ. ನಂಜು ನಿವಾರಕ ಆಹಾರವನ್ನು ಸೇವಿಸಿ.
ಸಿಂಹ
ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ. ಬಂದಂಥ ಉಡುಗೊರೆ ನೋಡುವ ಸಾಧ್ಯತೆ ಇದೆ. ಮಾತು ಕಡಿಮೆ ಆಡಿದಷ್ಟೂ ಒಳ್ಳೆಯದು.
ಕನ್ಯಾ
ಕೆಲವೊಂದು ಅರ್ಥವಿಲ್ಲದ ಕುಟುಂಬದ ನಡೆಗಳನ್ನು ವಿರೋಧಿಸಿ ಧ್ವನಿಯನ್ನು ಎತ್ತುವಿರಿ. ಯಾವುದೇ ಸವಾಲುಗಳು ಎದುರಾದರೂ ಬುದ್ಧಿವಂತಿಕೆ ಹಾಗೂ ಧೈರ್ಯದಿಂದ ಅದನ್ನು ಎದುರಿಸುವಿರಿ
ತುಲಾ
ದೇಹದ ಸೌಂದರ್ಯ ವರ್ಧನೆಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ತಾಯಿಯಿಂದ ಕಲಿತ ಪಾಠಗಳನ್ನು ಮುಂದಿನ ಪೀಳಿಗೆಗೆ ಕಲಿಸಿಕೊಡುವಂಥ ಸಂತಸದ ದಿನಗಳಿಗೆ ಗಣನೆಯನ್ನು ಮಾಡುವಿರಿ.
ವೃಶ್ಚಿಕ
ವ್ಯವಹಾರದಲ್ಲಿ ಸಹೋದ್ಯೋಗಿಗಳ ಜತೆಯಲ್ಲಿ ಉತ್ತಮವಾದ ಸಂಬಂಧವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹೊಸ ಹೊಸ ವಿಚಾರಗಳನ್ನು ನಿಮ್ಮ ಸಹೋದರಿಯಿಂದ ಕಲಿಯಲು ಮುಂದಾಗುತ್ತೀರಿ.
ಧನು
ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಅವರಿಂದಾಗಿಯೇ ಹೆಸರು ಹಾಳಾಗುವಂತೆ ಮಾಡುವ ಪ್ರಯತ್ನ ನಡೆಯಬಹುದು. ಹಾಸ್ಯ ಪ್ರವೃತ್ತಿಯ ನಿಮ್ಮ ವ್ಯಕ್ತಿತ್ವ ಬೇಸರದಲ್ಲಿರುವವರನ್ನು ಸಂತಸ ಪಡಿಸುತ್ತದೆ.
ಮಕರ
ಮಾನಸಿಕವಾಗಿ ನಿರ್ಧಾರಗಳಲ್ಲಿ ಸ್ಥಿರತೆ ಬರುವವರೆಗೂ ಇತರರ ಮುಂದೆ ಪ್ರಸ್ತುತ ಪಡಿಸಬೇಡಿ. ಆಕಾಶ ವೀಕ್ಷಣೆಯನ್ನು ನಿಯಮಬದ್ಧವಾಗಿ ಮಾಡುವವರಿಗೆ ಉತ್ತಮ ಜತೆಗಾರರೊಬ್ಬರು ದೊರೆಯಲಿದ್ದಾರೆ.
ಕುಂಭ
ಸಾಮರ್ಥ್ಯದ ಅರಿವಿಲ್ಲದೆ ಲಘುವಾಗಿ ಮಾತನಾಡಿದವರಿಗೆ ಸರಿಯಾದ ಪಾಠವನ್ನು ಕಲಿಸುವಿರಿ. ಉತ್ತಮ ಪ್ರತಿಜ್ಞೆಗಳೊಂದಿಗೆ ಶುರುವಾದ ಕಾರ್ಯವು ಶುಭಫಲ ನೀಡುವುದು. ಮರೆವಿನಿಂದ ಕಷ್ಟಗಳಾಗುವವು.
ಮೀನ
ಪ್ರಾರ್ಥನೆಯು ದೇವರನ್ನು ತಲುಪಿತು ಎನ್ನುವಂತೆ ನಿಮ್ಮ ಅಭೀಷ್ಟಗಳು ನೆರವೇರುವವು. ವಿವಿಧವಾದ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭ ಬರುತ್ತದೆ. ಮುಂದಿನ ಓದಿನ ಬಗ್ಗೆ ಯೋಚಿಸುವಿರಿ.