ಮಂಗಳವಾರ, 23 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಉದ್ಯೋಗ ಬದಲಿಸುವ ವಿಚಾರದಲ್ಲಿ ಯೋಚಿಸುವುದು ಉತ್ತಮ
Published 22 ಡಿಸೆಂಬರ್ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಗೃಹದಲ್ಲಿ ಸಂಭ್ರಮದ ಸಮಾರಂಭದಿಂದ ಅಥವಾ ವೃಥಾ ತಿರುಗಾಟದಿಂದಾಗಿ ಖರ್ಚು ಹೆಚ್ಚಾಗಲಿದೆ. ಪೆಟ್ರೋಲಿಯಂ ಉತ್ಪನ್ನಗಳಿಂದ ಹೆಚ್ಚಿನ ಆದಾಯವಿದೆ. ನೌಕರರಿಗೆ ಅನುಕೂಲ ವಾತಾವರಣ ಸಿಗಲಿದೆ.
ವೃಷಭ
ಹಿಂದಿನ ಸೋಲು ಬಾಧಿಸುತ್ತಿದ್ದರೂ ಹೊಸತನದಲ್ಲಿ ಜಯ ಕಾಣುವಿರಿ. ಆಫೀಸಿನ ಕೆಲಸಗಳಿಗೆ ದೂರದ ಪ್ರಯಾಣ ಲಾಭದಾಯಕ. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿವೆ.
ಮಿಥುನ
ದೇವತಾ ಕೃಪೆಯಿಂದ ಕೆಲಸಗಳನ್ನೂ ಲಾಭಮಯವಾಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.  ಬುದ್ಧಿವಂತಿಕೆಯನ್ನೂ ಉಪಯೋಗಿಸಿ. ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಳ್ಳುವ ಬಗ್ಗೆ ಪ್ರಯತ್ನಿಸಿ.
ಕರ್ಕಾಟಕ
ಸ್ವಲ್ಪ ಜಾಗ್ರತೆ ವಹಿಸಿದಲ್ಲಿ ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲಾ ಉತ್ತಮ ರೀತಿಯಲ್ಲಿ ನಡೆಯಲಿವೆ. ಕಾರ್ಯಕ್ಷೇತ್ರದಲ್ಲಿ ಶಾಂತಚಿತ್ತದಿಂದ ವ್ಯವಹರಿಸಿದರೆ ಹಾದಿ ಸುಗಮ.
ಸಿಂಹ
ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸಿ. ವಾಹನ ಮಾರಾಟದಿಂದ ಉತ್ತಮ ಆದಾಯ. ಸಾಧನೆ ಹಾಗೂ ಅಭಿವೃದ್ಧಿ ಸಾಧಿಸುವ ದಿನ ಎನಿಸಲಿದೆ.
ಕನ್ಯಾ
ಯಾವುದೇ ವಿಷಯವನ್ನು ಸೋಮಾರಿತನದಿಂದಾಗಲೀ, ಆರ್ಥಿಕ ಸಮಸ್ಯೆಯಿಂದಾಗಲೀ ಮುಂದೂಡುವುದು ಸರಿಯಲ್ಲ. ಹಿರಿಯರ ಮಧ್ಯಸ್ತಿಕೆಯಿಂದ ಭೂವಿವಾದ ಬಗೆಹರಿಯುವುದು.  ಸಂತಸದ ಸುದ್ದಿ ಕೇಳಿ ಬರುವುದು.
ತುಲಾ
ಬೆಳ್ಳಗೆ ಇರುವುದೆಲ್ಲವೂ ಹಾಲು ಎಂದು ನಂಬುವ ನಿಮ್ಮ ಮನೋಧರ್ಮದಿಂದ ಈ ದಿನ ಮೋಸ ಹೋಗುವಿರಿ. ಕರ್ತವ್ಯ ದೃಷ್ಟಿಯಿಂದ ವೃತ್ತಿಕ್ಷೇತ್ರದಲ್ಲಿ ಒಂದೇ ಮನಸ್ಸಿನಲ್ಲಿ ದುಡಿದರೆ ಸಮಾಧಾನ ಹೆಚ್ಚುತ್ತದೆ.
ವೃಶ್ಚಿಕ
ಟೆಕ್ಸ್ಟ್‌ಟೈಲ್‌ ಉದ್ಯಮದವರಿಗೆ ರಫ್ತು ವ್ಯಾಪಾರಗಳಿಂದ ಬಹಳಷ್ಟು ಹಣ ಹಾಗೂ ವ್ಯಾಪಾರಗಳ ಲಾಭವನ್ನು ಹೊಂದುವರು. ಎಲ್ಲಾ ಕೆಲಸಗಳಿಗೂ ಕುಟುಂಬ ವರ್ಗದವರ ಬೆಂಬಲವಿರಲಿದೆ.
ಧನು
ಬಹಳ ದಿನಗಳ ನಂತರದ ಸಹೋದರಿಯ ಆಗಮನ ತಂದೆ-ತಾಯಿಯ ಸಂತೋಷಕ್ಕೆ ಕಾರಣವಾಗುತ್ತದೆ. ಪೊಲೀಸ್ ಅಧಿಕಾರಿಗಳು ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವುದು.
ಮಕರ
ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ. ಔದ್ಯೋಗಿಕ ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕ ಅಥವಾ ಅದಕ್ಕೂ ಮಿಗಿಲಾದ ಫಲಗಳು ದೊರೆತು ನೆಮ್ಮದಿ ಕಾಣುವಂತಾಗುವುದು.
ಕುಂಭ
ಇನ್ನೊಬ್ಬರಿಗೆ ನೋವಿಗೆ ಸಮಾಧಾನ ಹೇಳುವ ಅಥವಾ ಕಷ್ಟದಲ್ಲಿರುವವರಿಗೆ ಉಪಕಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ. ನಿರೀಕ್ಷೆಗೂ ಮೀರಿದ ಫಲಿತಾಂಶ ಕಾಣುವಿರಿ.
ಮೀನ
ನೂತನ ಸ್ನೇಹಿತನಿಂದ ಅಥವಾ ಅಪರಿಚಿತರ ವ್ಯಕ್ತಿಯ ಸಹಕಾರದಿಂದ ನಿಮ್ಮ ಕಾರ್ಯ ವ್ಯವಸ್ಥಿತವಾಗಿ ನಡೆಯಲಿದೆ. ಸಹೋದ್ಯೋಗಿಗಳ ಸಂಯಮದ ವರ್ತನೆಯಿಂದ ಅನುಕೂಲ.  ಹೆಚ್ಚುವರಿ ಆದಾಯದಿಂದ ಹುಮ್ಮಸ್ಸು ಹೆಚ್ಚಲಿದೆ. 
ADVERTISEMENT
ADVERTISEMENT