ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಉದ್ಯೋಗ ರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡು ಬರಲಿದೆ
Published 15 ಜೂನ್ 2024, 1:45 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇತರರಿಗಿಂತ ವಿಭಿನ್ನವಾಗಿ ಪರಿಣತರಾದ ನೀವು ನಿಮ್ಮದೇ ಕ್ಷೇತ್ರದಲ್ಲಿನ ಸವಾಲುಗಳನ್ನು ಲೀಲಾಜಾಲವಾಗಿ ಎದುರಿಸುವಿರಿ. ನಿಮ್ಮ ವ್ಯಕ್ತಿತ್ವವು ಇತರರನ್ನು ಈ ದಿನ ಆಕರ್ಷಿಸಲಿದೆ.
ವೃಷಭ
ನಿಮ್ಮನ್ನು ದೂಷಿಸಿದ ವ್ಯಕ್ತಿಗಳಿಗೆ ನಿಮ್ಮ ಅಭಿವೃದ್ಧಿ ನೋಡಿ ಸಹಿಸಲಾಗದಂತಾಗಲಿದೆ. ನಿಮ್ಮ ಉದ್ಯೋಗದ ಬದುಕಿನಲ್ಲಿ ತಪ್ಪಿ ಹೋಗಿದ್ದ ಅವಕಾಶಗಳು ಮತ್ತೆ ನಿಮಗೆ ದೊರೆಯುವ ಸಂಭವವಿದೆ.
ಮಿಥುನ
ಉದ್ಯೋಗ ರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡು ಬರಲಿದೆ. ವ್ಯಾಪಾರ ಹಾಗೂ ವಾಣಿಜ್ಯದ ಸುಧಾರಣೆಗೆ ಸಾಕಷ್ಟು ಅಡೆತಡೆಗಳಾಗಲಿದೆ. ಪ್ರವಾಸ ಹೋಗುವ ಯೋಜನೆಗಳು ಕಾರ್ಯ ರೂಪಕ್ಕೆ ಬರಲಿದೆ.
ಕರ್ಕಾಟಕ
ಕೈಗೊಂಡ ಕೆಲಸಗಳು ಆರ್ಥಿಕ ಕಾರಣದಿಂದ ವಿಳಂಬವಾಗುವ ಸಾಧ್ಯತೆಯಿದೆ. ಸೂರ್ಯೋದಯದೊಳಗೆ ನಿಮ್ಮ ಮನಸ್ಸಿನ ಸಂಕಲ್ಪವನ್ನು ನೆರವೇರಿಸಿಕೊಳ್ಳಲು ಪ್ರಯತ್ನ ನಡೆಸುವಿರಿ.
ಸಿಂಹ
ಚಿಂತಾಕ್ರಾಂತರಾದಾಗ ನಿಮ್ಮ ಸುಖ-ದುಃಖ ಹಂಚಿಕೊಳ್ಳುವ ಮಿತ್ರರು ಜೊತೆಗಿರಲಿದ್ದಾರೆ. ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಹೆಚ್ಚಿನ ಸಂಪಾದನೆ ಜೊತೆಗೆ ಉಡುಗೊರೆ ಸಿಗಲಿದೆ.
ಕನ್ಯಾ
ಸುಖ-ದುಃಖ, ಲಾಭ-ನಷ್ಟಗಳೆರಡು ಸಮಾನವಾಗಿದ್ದರೂ ಪ್ರತಿಷ್ಟಿತ ಜನರ ಸಹಕಾರದಿಂದ ಸುಧಾರಣೆ ಕಂಡು ಬರಲಿದೆ. ಕಾಶಿಪುರಾಧೀಶ್ವರಿ ಅನ್ನಪೂರ್ಣೇಶ್ವರಿ ದರ್ಶನ ಮಾಡಿ, ಧ್ಯಾನಿಸಿ ಶುಭವಾಗಲಿದೆ.
ತುಲಾ
ರೈತರಿಗೆ ಹೆಚ್ಚಿನ ಲಾಭಾಂಶ ಅದರಲ್ಲೂ ತೆಂಗಿನಕಾಯಿ ಬೆಳೆಗಾರರಿಗೆ ತಮ್ಮ ಬೆಳೆಗೆ ಅಧಿಕ ಬೆಲೆ ಕಂಡು ಬರುತ್ತದೆ. ಮಾನಸಿಕ ಒತ್ತಡ ಹೆಚ್ಚಾಗಿರುವುದು ಹಾಗೆಯೇ ತಾಂತ್ರಿಕವಾಗಿ ಯಾವುದೇ ತಪ್ಪುಗಳು ಆಗದಂತೆ ಎಚ್ಚರವಹಿಸಿ.
ವೃಶ್ಚಿಕ
ಯಾವುದೇ ಕೆಲಸ ಮಾಡುವ ಮುನ್ನ ಅದರ ಫಲಾಫಲಗಳನ್ನು ಅರಿತು ಕಠಿಣ ಶ್ರಮದಿಂದ ಕಾರ್ಯ ನಿರ್ವಹಿಸಿದಲ್ಲಿ ಕಹಿಯ ಸನ್ನಿವೇಶಗಳು ಸಹಜ ಸ್ಥಿತಿಗೆ ಮರಳಲಿವೆ. ತಂಗಿಯರ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ.
ಧನು
ಯುವಕರು ತಮ್ಮ ಪೂರ್ಣ ಸಾಮರ್ಥ್ಯ ಬಳಸಿ ವಿದ್ಯಾಭ್ಯಾಸವನ್ನು ಮಾಡಬೇಕು. ಹೊಸ ವ್ಯವಹಾರದಲ್ಲಿ ಸ್ನೇಹಿತರ ಹಿತವಚನ, ಸಹಾಯ ಹಾಗೂ ಸಹಕಾರ ದೊರೆಯಲಿದೆ.
ಮಕರ
ದೊಡ್ಡ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಯೋಚಿಸಿ ಪರಿಹರಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಿ. ಸಮಸ್ಯೆಗಳ ಬಗ್ಗೆಯೇ ಹೆಚ್ಚು ಯೋಚನೆ ಮಾಡುವುದರಿಂದ ಅದಕ್ಕೆ ಪರಿಹಾರ ಸಿಗುವುದಿಲ್ಲ.
ಕುಂಭ
ಕೆಲಸದಲ್ಲಿ ಬದಲಾವಣೆ ಕಾಣಲಿದ್ದೀರಿ ಹಾಗೂ ನಿಮ್ಮ ಜೀವನ ಶೈಲಿಯೂ ವಿಭಿನ್ನವಾಗಿ ಬದಲಾಗಲಿದೆ. ಧನ ಆದಾಯಕ್ಕೆ ಅಡ್ಡಿ ಆತಂಕಗಳು ಇರುವುದಿಲ್ಲ. ಮನಸ್ಸಿಗೆ ಹಿತವಾದ ಅನುಭವ ಪಡೆಯಲಿದ್ದೀರಿ.
ಮೀನ
ನಿಮ್ಮ ಪೂರ್ವನಿಯೋಜಿತ ಕೆಲಸ ಕಾರ್ಯಗಳು ಸರ್ವರ ಸಹಾಯದಿಂದ ಮಂದಗತಿಯಲ್ಲಿ ಹಂತ ಹಂತವಾಗಿ ಪೂರ್ಣಗೊಳ್ಳಲಿವೆ. ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ.