ದಿನ ಭವಿಷ್ಯ: ಸದಾಕಾಲ ಪಕ್ಕದಲ್ಲಿಯೇ ಇರುವ ಪರಿಚಿತರಿಂದ ವಂಚನೆ
Published 25 ಡಿಸೆಂಬರ್ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಈ ದಿನ ನೀವು ಕುಟುಂಬಸ್ಥರೊಂದಿಗೆ ಸಂತೋಷದಿಂದ ವರ್ತಿಸುವುದು ಒಳ್ಳೆಯದು. ಧೈರ್ಯ ಮತ್ತು ಅಧಿಕ ಪ್ರಯತ್ನದಿಂದ ಮುನ್ನುಗ್ಗಿದಲ್ಲಿ ಮುಖ್ಯವಾದ ಕೆಲಸವೊಂದು ದಿನದ ಅಂತ್ಯದ ವೇಳೆಗೆ ನೆರವೇರುವುದು.
ವೃಷಭ
ಯಾವುದೇ ರಂಗದಲ್ಲಾದರೂ ನಿಮ್ಮ ಬಯಕೆಗೆ ತಕ್ಕಂತೆ ದೂರ ಕ್ರಮಿಸುವ ಸಾಮರ್ಥ್ಯ ನಿಮಗಿದೆ. ಧ್ಯಾನ, ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದುವಿರಿ. ತೆಂಗಿನಕಾಯಿ ವ್ಯಾಪಾರಿಗಳಿಗೆ ಹೆಚ್ಚು ಲಾಭವಿದೆ.
ಮಿಥುನ
ಆಸ್ತಿ ಕೊಳ್ಳುವುದರಲ್ಲಾಗಲಿ, ಮನೆ ಕಟ್ಟುವ ವಿಚಾರದಲ್ಲಾಗಲಿ ಅದೃಷ್ಟ ನಿಮ್ಮ ಪಾಲಿಗಿದೆ. ನಿಮ್ಮ ದುಡುಕು ನಿರ್ಧಾರಗಳಿಂದ ಇತರರಿಗೆ ನೋವಾಗಬಹುದು. ಚಂಡಿಕಾ ಪಾರಾಯಣದಿಂದ ನೆಮ್ಮದಿ ದೊರಕಲಿದೆ.
ಕರ್ಕಾಟಕ
ಈ ದಿನ ಉದ್ಯೋಗರಂಗದಲ್ಲಿ ಮೇಲಾಧಿಕಾರಿ ವರ್ಗದವರ ಕಿರಿಕಿರಿ ಇದ್ದರೂ ನಿಮ್ಮ ಪ್ರಯತ್ನಬಲಕ್ಕೆ ಯಶಸ್ಸು ದೊರಕಲಿದೆ. ಶ್ರಮ ಜೀವಿಗಳಿಗೆ ಶ್ರಮಕ್ಕೆ ಮೀರಿದ ಪ್ರತಿಫಲ ಸಿಗಲಿದೆ.
ಸಿಂಹ
ನ್ಯಾಯಾಲಯದ ವಿಚಾರಗಳಲ್ಲಿ ಮಧ್ಯಸ್ಥಿಕೆ ಅಥವಾ ರಾಜಿಯ ಮನೋಭಾವವು ಕಾರ್ಯದ ಅನುಕೂಲಕ್ಕೆ ಸಾಧಕವಾಗುತ್ತದೆ. ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕುಗಳನ್ನು ಸ್ನೇಹಿತನ ಸಹಾಯದಿಂದ ನಿವಾರಿಸಿಕೊಳ್ಳುವಿರಿ.
ಕನ್ಯಾ
ನಿಮ್ಮ ಸುತ್ತಮುತ್ತಲಿನವರ ಜೊತೆಯಲ್ಲಿ ಸಂಬಂಧಗಳು ಕೆಡಲುಆಸ್ಪದಕೊಡದಿರಿ. ಭೂಮಿಗೆ ಸಂಬಂಧಿಸಿದಂತೆ ವ್ಯವಹಾರ ನೆಡೆಸುವವರಿಗೆ ಶುಭ ದಿನ. ವಿಮಾ ಸಲಹೆಗಾರರಿಗೆ ಅತ್ಯುತ್ತಮ ದಿನವಾಗಲಿದೆ.
ತುಲಾ
ಸದಾಕಾಲ ಪಕ್ಕದಲ್ಲಿಯೇ ಇರುವ ಪರಿಚಿತರಿಂದ ವಂಚನೆಯಾಗುವ ಸಾಧ್ಯತೆಯಿದೆ. ಅನವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ಇರುವುದು. ನಿಮ್ಮ ಹಿತಾಸಕ್ತಿಗಳಿಗೆ ಹೆಚ್ಚಿನ ಗಮನವನ್ನು ಕೊಡಿ.
ವೃಶ್ಚಿಕ
ಪರೋಪಕಾರಗಳನ್ನು ಮಾಡಿ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವಿರಿ. ನಿಮ್ಮೆಲ್ಲ ಆಕಾಂಕ್ಷೆಗಳ ಸಿದ್ಧಿಯಾಗಿ, ಧಾರ್ಮಿಕ ಪ್ರವೃತ್ತಿಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
ಧನು
ಕಳೆಯಿತು ಎಂದುಕೊಂಡ ರೋಗವೊಂದು ಮತ್ತೆ ನಿಮ್ಮನ್ನು ಬೆಂಬಿಡದೆ ಕಾಡಿಸುತ್ತದೆ. ಪೊಲೀಸ್ ಅಧಿಕಾರಿಗಳಿಗೆ ತುರ್ತು ಕೆಲಸ ಒದಗಿಬರುವುದು. ವಾಹನ ಖರೀದಿಯಂತಹ ವಿಚಾರದಲ್ಲಿ ಕೈಯನ್ನು ಖಾಲಿ ಮಾಡಿಕೊಳ್ಳಬೇಡಿ.
ಮಕರ
ಮನೋಬಲದ ಜೊತೆಯಲ್ಲಿ ಆರ್ಥಿಕ ಬಲವನ್ನು ದೃಢವಾಗಿಸಿಕೊಂಡರೆ ಮಾತ್ರ ಕಾರ್ಯ ಸಾಧಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಪ್ರಮುಖ ವಿಚಾರದಲ್ಲಿ ಮುಂದಿನ ಹೆಜ್ಜೆಯಿಡಲು ಸೂಕ್ತ ಸಮಯವಲ್ಲ.
ಕುಂಭ
ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ದೊರೆಯಲಿದೆ. ಸಾಮಾಜಿಕ ವರ್ತನೆಯಲ್ಲಿ ಸ್ಥಿರತೆ , ಸಮತೋಲನ ಕಾಯ್ದುಕೊಳ್ಳಿ. ಎಂತಹ ದುಸ್ಥಿತಿಯಿಂದಲೂ ಹೊರ ಬರುವ ಸಾಮರ್ಥ್ಯ ನಿಮ್ಮಲ್ಲಿದೆ.
ಮೀನ
ಹಣಕಾಸು ಸಂಸ್ಥೆಗೆ ಪಾಲುದಾರರಾಗಿ ಸೇರಿಕೊಳ್ಳುವ ಯೋಚನೆಯಲ್ಲಿರುವವರಿಗೆ ವ್ಯವಹಾರದ ಉದ್ದಗಲವು ತಿಳಿಯುವುದು. ಔಷಧಿ ವಸ್ತುಗಳ ಮಾರಾಟದಿಂದ ಹೆಚ್ಚು ಲಾಭವಿದೆ. ಆರ್ಥಿಕ ಭದ್ರತೆ ಬಗ್ಗೆ ತಯಾರಿ ನಡೆಸಿಕೊಳ್ಳಿ.