ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
Horoscope Today | ದಿನ ಭವಿಷ್ಯ: ಈ ರಾಶಿಯವರ ಹಳೆಯ ವ್ಯಾಜ್ಯಗಳು ಇತ್ಯರ್ಥಗೊಳ್ಳುವ ಸಂಭವ
Published 2 ಜುಲೈ 2023, 19:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಕ್ಕಳ ಕೆಲವೊಂದು ವಿಚಾರಗಳು ಮಾನಸಿಕ ಸ್ಥಿತಿಯನ್ನು ಕೆಡಿಸಲಿವೆ. ಹೊಸ ಹಾದಿಯಲ್ಲಿ ಹೆಜ್ಜೆ ಇಡಲು ಸುಸಮಯ. ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿದೆ. ಸಕಾಲದಲ್ಲಿ ಮಿತ್ರರ ನೆರವು ಸಿಗುವುದು.
ವೃಷಭ
ವಿದ್ಯಾರ್ಥಿಗಳು ಸ್ವಲ್ಪ ಶ್ರಮವಹಿಸಿ ಓದಿದರೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಲಭ್ಯವಾಗುವುದು. ಕಾರ್ಯಕ್ಷೇತ್ರದಲ್ಲಿನ ಹೆಚ್ಚುವರಿ ಕೆಲಸದಿಂದ ಆದ ಒತ್ತಡಗಳಿಂದ ಹೊರಬರಲು ವಿಶ್ರಾಂತಿ ಅಗತ್ಯ ಇರುವುದು.
ಮಿಥುನ
ಸರ್ವರಂಗದಲ್ಲೂ ಜಯಶಾಲಿಯ ಪಟ್ಟ ಹೊಂದುವ ಯೋಗವಿದೆ. ಉದ್ಯೋಗದಲ್ಲಿನ ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಎದುರಾಗುವ ತೊಂದರೆಗಳನ್ನು ಎದುರಿಸುವಾಧೈರ್ಯಗೆಡದಿರಿ.
ಕರ್ಕಾಟಕ
ಸ್ವಂತ ಕೆಲಸವನ್ನು ಜರೂರಾಗಿ ಮಾಡಬೇಕಾಗುತ್ತದೆ. ಅನ್ಯರ ಸಹಾಯ, ಸಹಕಾರವೆಂಬುವುದು ಈ ದಿನ ಇಲ್ಲವಾಗುವುದು. ಅನುಭವಿಸಿದ ಸಮಸ್ತ ಸಮಸ್ಯೆಗಳಿಗೆ ಮುಕ್ತಿಸಿಗಲಿದೆ.
ಸಿಂಹ
ದಾರಿಹೋಕರ ಟೀಕೆಗಳಿಗೆ ಹೆದರದೆ ಕೆಲಸದಲ್ಲಿ ಸಕಾರಾತ್ಮಕವಾಗಿ ಮುಂದುವರೆಯಿರಿ. ಲೋಹದ ವಸ್ತು ವ್ಯಾಪಾರ ಮಾಡುವವರು ದುಪ್ಪಟ್ಟು ಲಾಭ ಪಡೆಯಬಹುದು. ಹೂವಿನ ವ್ಯಾಪಾರಿಗಳಿಗೆ ಯಶಸ್ಸು.
ಕನ್ಯಾ
ನಿಮ್ಮ ಆದಾಯ ಮತ್ತು ನಿಮ್ಮ ಖರ್ಚುಗಳನ್ನು ಸರಿದೂಗಿಸಿಕೊಳ್ಳುವುದು ಕಷ್ಟವೆನಿಸುವುದಿಲ್ಲ. ಅವಕಾಶ ಸೂಕ್ತವಾಗಿ ಬಳಸಿಕೊಂಡಲ್ಲಿ ಮುನ್ನಡೆ ಸಾಧಿಸುವಿರಿ. ಮೃದು ಭಾಷಿಗಳುಎನಿಸಿಕೊಳ್ಳುವಿರಿ.
ತುಲಾ
ಇತರರ ಒತ್ತಾಯಕ್ಕೆ ನಿಮಗೆ ಬೇಡದಿರುವ ತೀರ್ಮಾನವನ್ನು ತೆಗೆದುಕೊಳ್ಳಬೇಡಿ. ನಿರೀಕ್ಷಿತ ಧನಾಗಮನವಿದ್ದರೂ ಆರ್ಥಿಕ ವಿಷಯಗಳಲ್ಲಿ ಎಚ್ಚರವಹಿಸಿ. ಶ್ರೀ ದುರ್ಗಾದೇವಿಯನ್ನು ಭಜಿಸಿ ಶುಭವಾಗುತ್ತದೆ.
ವೃಶ್ಚಿಕ
ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತಹ ಕೋರ್ಟಿನಲ್ಲಿರುವ ಹಳೆಯ ವ್ಯಾಜ್ಯಗಳು ಈ ದಿನ ಇತ್ಯರ್ಥಗೊಳ್ಳುವ ಸಂಭವ. ಧ್ಯಾನ ಹಾಗೂ ಯೋಗದ ಅಭ್ಯಾಸದಿಂದ ಅನುಕೂಲ. ಬಂಧುಗಳ ಆಗಮನದಿಂದ ಸಂತಸ.
ಧನು
ಶರೀರದಲ್ಲಿನ ನವ ಚೈತನ್ಯವು ಕಾರ್ಯಪ್ರವೃತ್ತಿ ಹೊಂದುವಂತೆ ಮಾಡುವುದು. ಷೇರು ವ್ಯಾಪಾರವು ಇಂದು ಅದೃಷ್ಟದಾಯಕವಾಗಿರುತ್ತದೆ. ಅನಿರೀಕ್ಷಿತ ಸುದ್ದಿ ನಿಮ್ಮನ್ನು ಧೈರ್ಯಗೆಡುವಂತೆ ಮಾಡಲಿದೆ.
ಮಕರ
ವ್ಯಾಪಾರ, ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿನ ಸುಧಾರಣೆಗೆ ಈ ದಿನ ಸಾಕಷ್ಟು ಅವಕಾಶವಿದೆ. ಆರೋಗ್ಯ ಸುಧಾರಿಸಿ ಎಂದಿನಂತೆ ಕೆಲಸಕ್ಕೆ ತೆರಳುವಂತಾಗುತ್ತದೆ.
ಕುಂಭ
ಕೆಲಸದಲ್ಲಿ ಬದಲಾವಣೆ ಕಾಣಲಿದ್ದೀರಿ. ನಿಮ್ಮ ಜೀವನ ಶೈಲಿಯೂ ವಿಭಿನ್ನ ಬದಲಾಗಲಿದೆ. ಜಲ ಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ. ಸೋಮಾರಿತನ ಶ್ರೇಯಸ್ಸಿಗೆ ಅಡ್ಡಿ ಬರದಂತೆ ಗಮನಹರಿಸಿಕೊಳ್ಳಿರಿ.
ಮೀನ
ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ ಅಥವಾ ಬಂಧು ಮಿತ್ರರು ಮನೆಗೆ ಬರಲಿದ್ದಾರೆ. ನೀವು ಮಾಡುವ ಕೆಲಸದಲ್ಲಿ ದೋಷಗಳು ಸಂಭವಿಸಲಿದೆ. ರೈತರಿಗೆ ಕೆಲಸದಲ್ಲಿ ಹೊಸ ಚೈತನ್ಯದಿಂದ ಲಾಭ ಆಗುವುದು.