ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಹಿಂದೆ ರೂಪಿಸಿದ್ದ ಯೋಜನೆಗಳು ಯಶಸ್ಸುಗೊಳ್ಳಲಿವೆ
Published 14 ಜೂನ್ 2024, 0:09 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾತನ್ನು ತಿರಸ್ಕರಿಸಿ ಬೇರೆಯ ಮಾರ್ಗ ಹಿಡಿದಂಥ ಮಕ್ಕಳು ಪಶ್ಚಾತಪಿಸುತ್ತಿರುವುದನ್ನು ಕಾಣುವಿರಿ. ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ನೆಮ್ಮದಿ ಮೂಡುತ್ತದೆ. ನೂತನ ವಸ್ತ್ರ ಖರೀದಿ ಯೋಗವಿದೆ.
ವೃಷಭ
ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುವಂಥ ಆಹಾರ ಪದಾರ್ಥಗಳು ಜೀವನಕ್ರಮದಲ್ಲಿ ಇದೆಯೇ ಎಂದು ಕಂಡುಕೊಳ್ಳಿರಿ. ಮನೆಯಲ್ಲಿ ಮಾತಿನಿಂದ ಯುದ್ಧದ ವಾತಾವರಣ ನಿರ್ಮಾಣ ಮಾಡಿಕೊಳ್ಳದಿರಿ.
ಮಿಥುನ
ನೆರೆ-ಹೊರೆಯವರೊಂದಿಗಿನ ವ್ಯವಹಾರಿಕ ಸಂಬಂಧದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ದೊಡ್ಡ ಮಟ್ಟದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಹಿಂದೆ ರೂಪಿಸಿದ್ದ ಯೋಜನೆಗಳು ಯಶಸ್ಸುಗೊಳ್ಳಲಿವೆ.
ಕರ್ಕಾಟಕ
ಮನೆಯನ್ನು ಶುಚಿಗೊಳಿಸುವ ಕೆಲಸವನ್ನು ಇನ್ನು ಯಾವ ಕಾರಣಕ್ಕಾಗಿಯು ಮುಂದೆ ಹಾಕುವುದು ಸೂಕ್ತವಲ್ಲ. ಮಹತ್ತರ ಕಾರ್ಯವನ್ನು ಶುರು ಮಾಡುವ ಮೊದಲಿಗೆ ಗುರು ಹಾಗೂ ಗಣಪತಿಯನ್ನು ಸ್ಮರಿಸಿ.
ಸಿಂಹ
ದೇಶಭಕ್ತಿಯ ಹೆಸರಿನಲ್ಲಿ ನಡೆಸಿರುವ ಹಾಗೂ ನಡೆಸುವ ಕಾರ್ಯಗಳು ಮಾನ್ಯವಾಗುತ್ತವೆ. ಹತ್ತಿರದ ಬಂಧುಗಳನ್ನು ಅನಿರೀಕ್ಷಿತವಾಗಿ ಕಂಡು ಹರ್ಷ ಉಂಟಾಗುತ್ತದೆ. ಮಾರ್ಗದರ್ಶಕರ ಸಲಹೆ ಪಡೆದು ಪಾಲಿಸಿರಿ.
ಕನ್ಯಾ
ಮಿತ್ರರಿಂದ ಸಹಾಯ ಪಡೆಯುವುದು ಮಾತ್ರವಲ್ಲದೆ ಅವರ ಕಷ್ಟಕಾಲದಲ್ಲಿ ಸಹಾಯವನ್ನು ಮಾಡಲು ಸರ್ವಸನ್ನದ್ಧರಾಗಿ ಇರಬೇಕಾಗುತ್ತದೆ. ಕೃಷಿಕರಿಗೆ ಕೃಷಿಯಲ್ಲಿ ಉತ್ಸಾಹ ಹೆಚ್ಚುವಂತಾಗಲಿದೆ.
ತುಲಾ
ಸ್ಥಾನಮಾನದಲ್ಲಿ ಬೇರೆಯವರು ಪಡುವ ಈರ್ಷ್ಯೆಯನ್ನು ಕಳೆದುಕೊಳ್ಳಲು ಉತ್ತಮ ಸನ್ನಿವೇಶವು ಉಂಟಾಗುವುದು. ಉತ್ತಮ ಧೇಯೋದ್ಧೇಶಕ್ಕಾಗಿ ಇಂದಿನಿಂದ ಶ್ರಮವನ್ನು ಪಡುವಿರಿ.
ವೃಶ್ಚಿಕ
ಸ್ಥಿರ ಆಸ್ತಿಯನ್ನು ಸಂಪಾದಿಸುವ ನಿರ್ಣಯದಲ್ಲಿ ದೃಢವಾಗಿ ನಿಲ್ಲುವಂಥ ತೀರ್ಮಾನ ಮಾಡಿಕೊಳ್ಳಿರಿ. ಸ್ವಪ್ನಸದೃಶ್ಯವಾದ ಘಟನೆಗಳನ್ನು ನೋಡುವ ಸಾಧ್ಯತೆ ಇದೆ. ಕೆಲಸಕಾರ್ಯದಲ್ಲಿ ಕಷ್ಟಗಳು ಎದುರಾಗಬಹುದು.
ಧನು
ವ್ಯವಹಾರದಲ್ಲಿನ ಹಿಂದಿನ ನಿರ್ಧಾರಗಳು ನಿಮ್ಮ ಒಳಿತಿಗಾಗಿ ಬದಲಾಗುವ ಸಂಭವವಿದೆ. ಗೃಹಸ್ಥಾಶ್ರಮದಲ್ಲಿನ ವಿರಕ್ತತೆ ಅನ್ಯರಿಗೆ ಬೇಜವಾಬ್ದಾರಿ ಎಂದೆನಿಸಬಹುದು.
ಮಕರ
ವೃತ್ತಿಯಲ್ಲಿ ಬದಲಾವಣೆ ಮಾಡುವವರು ಲಕ್ಷ್ಮಿ ಸಮೇತನಾದ ಶ್ರೀನಿವಾಸ ದೇವರ ಸೇವೆ ಮಾಡುವುದರಿಂದ ಅಭಿವೃದ್ಧಿ ಕಾಣಬಹುದು. ಮನೆಯಲ್ಲಿ ದೇವತಾಕಾರ್ಯ ಮಾಡುವ ತೀರ್ಮಾನ ಮಾಡಿರಿ.
ಕುಂಭ
ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ವೃತ್ತಿ ವಿಷಯಗಳಿಗೆ ಆದ್ಯತೆ ಸಿಗಲಿ. ಆದರ ಭಾವದಿಂದ ನಿಮ್ಮ ಸಂಬಂಧಿಗಳಲ್ಲಿ ನಡೆದುಕೊಳ್ಳುವಿರಿ. ಕಾರ್ಯನಿಮಿತ್ತದ ಪ್ರಯಾಣವನ್ನು ಮಾಡಬಹುದು.
ಮೀನ
ಒಡಹುಟ್ಟಿದವರ ಸಹಕಾರದಿಂದ ಮಾನಸಿಕ ನೆಮ್ಮದಿ ಹಾಗೂ ಸಂಸಾರದಲ್ಲಿ ಸಮತೋಲನ ಪಡೆಯುವಿರಿ. ಕುಟುಂಬದ ಹಿರಿಯರ ಆರೋಗ್ಯದ ವಿಷಯದಲ್ಲಿ ವಿಶೇಷ ಕಾಳಜಿವಹಿಸಿ.