ಶನಿವಾರ, 27 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಉದ್ಯೋಗ ಸಿಗಲಿದೆ
Published 26 ಡಿಸೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದಂತವೈದ್ಯರಿಗೆ ಮತ್ತು ಶಸ್ತ್ರ ಚಿಕಿತ್ಸಕರಿಗೆ ವೃತ್ತಿಯಲ್ಲಿ ಅತೀವ ಗಮನವಿರಬೇಕಾಗುತ್ತದೆ. ಕುಟುಂಬದ ಹಿರಿಯರು ಮಾಡಿದ ಪುಣ್ಯದ ಫಲಗಳು ಸಿಗಲಿವೆ. ಕುಟುಂಬದಲ್ಲಿ ಉಂಟಾಗಿದ್ದ ಕಲಹ ದೂರಾಗಲಿದೆ.
ವೃಷಭ
ಸದ್ಯದ ಪರಿಸ್ಥಿತಿಯಲ್ಲಿ ಹಣಕಾಸಿನ ಸ್ಥಿತಿಗತಿಗಳನ್ನು ನೋಡಿಕೊಂಡು ನಿವೇಶನ  ಖರೀದಿಸುವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ. ಸರ್ಕಾರಿ ಉದ್ಯೋಗಸ್ಥರು ಬಡ್ತಿ ಹೊಂದಲು ಬೇಕಾದ ತಯಾರಿ ಮಾಡಿ.
ಮಿಥುನ
ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು‌ ಕೆಲಸಗಳಲ್ಲಿ ಯಶಸ್ವಿ ಆಗುತ್ತೀರಿ. ದಾಂಪತ್ಯದಲ್ಲಿ ತಗ್ಗಿ-ಬಗ್ಗಿ ನಡೆಯುವುದನ್ನು ಕಲಿಯಿರಿ. ಇಲ್ಲವಾದಲ್ಲಿ ವಿರಸಕ್ಕೆ ಕಾರಣ. ಕೆಲಸದ ಹೊರೆ ಬೆಟ್ಟದಂತೆ ಇರುವುದು.
ಕರ್ಕಾಟಕ
ಔಷಧ ಕಂಪನಿಗಳಿಗೆ ಮತ್ತು ಔಷಧ ಮಾರಾಟ ಪ್ರತಿನಿಧಿಗಳಿಗೆ ಮಾರಾಟದಲ್ಲಿ ಹೆಚ್ಚಳ. ಬಾಲ್ಯದಲ್ಲಿ ಕಲಿತ ಕೆಲ ವಿಷಯಗಳು  ಉಪಯೋಗಕ್ಕೆ ಬರಲಿವೆ. ನೂತನ ಉದ್ಯೋಗ ದೊರೆತು ಸಮಾಧಾನವಾಗುವುದು.
ಸಿಂಹ
ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸಿ ಮುಂದಿನ ಹಂತವನ್ನು ಮುಟ್ಟುವಿರಿ. ಹಣಕಾಸಿನ ತಾಪತ್ರಯಗಳು ಶೀಘ್ರ ಪರಿಹಾರವಾಗುವುದು.
ಕನ್ಯಾ
ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿ ಜವಾಬ್ದಾರಿ ಹುದ್ದೆ ಸಿಗಲಿದೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಸೋದರವರ್ಗದವರ ಬೆಂಬಲ ಸಿಗಲಿದೆ. ಹಿರಿಯರ ಶುಶ್ರೂಷೆಯ ಬಗ್ಗೆ ಗಮನಹರಿಸಿ.
ತುಲಾ
ಮರಮಟ್ಟು, ಕೃಷಿ, ಹೈನುಗಾರಿಕೆ  ವೃತ್ತಿಗಳಲ್ಲಿರುವವರಿಗೆ ನಿರೀಕ್ಷಿತ ವರಮಾನ ದೊರೆಯಲಿದೆ. ಮನೆ ಕಟ್ಟುವ ಕೆಲಸ ದೇವರ ಕೃಪೆಯಿಂದ ನಿರ್ವಿಘ್ನವಾಗಿ ಮುಂದುವರಿಯಲಿದೆ. ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವುದು.
ವೃಶ್ಚಿಕ
ಸೇವಿಸುವಂಥ ಆಹಾರದಿಂದ ಆರೋಗ್ಯ ಹದಗೆಡುವಂತಾಗಬಹುದು. ಕಾಗದಪತ್ರ ಬರೆಯುವವರಿಗೆಗೆ ಮತ್ತು ಕಂಪ್ಯೂಟರ್ ಕೆಲಸಗಾರರಿಗೆ ತೃಪ್ತಿಕರ ದಿನ. ವಾಣಿಜ್ಯ ಬೆಳೆಗಾರರಿಗೆ ಉತ್ತಮ ಬೆಲೆ ದೊರಕಲಿದೆ.
ಧನು
ಶಿಕ್ಷಣ ವೃತ್ತಿಯಲ್ಲಿರುವವರಿಗೆ ಒತ್ತಡ ವೃದ್ಧಿಯಾಗುತ್ತದೆ. ಶೈಕ್ಷಣಿಕ ರಂಗದಲ್ಲಿನ  ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಸಂಪಾದಿಸುವಿರಿ.ಶುಭ ಕಾರ್ಯಗಳಿಗೆ ರಾಹುಕಾಲದ ನಂತರ ಪ್ರಯಾಣ ಬೆಳೆಸಿ.
ಮಕರ
ತಂದೆ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಕಡೆ ಗಮನವನ್ನು ನೀಡಬೇಕಾಗಬಹುದು. ಈ ದಿನದ ನಿರಾಸೆಯ ಜೀವನ ಶೈಲಿ  ಹಂತ ಹಂತ ಮುಕ್ತಾಯವಾಗುವುದು. ಹಳೆಯ ಯೋಜನೆಗಳಿಗೆ ಮರುಜೀವ ಸಿಗಲಿದೆ.
ಕುಂಭ
ಸುಗಂಧ ದ್ರವ್ಯದ ಬಗ್ಗೆ ಕೆಲಸ ಮಾಡುತ್ತಿರುವವರಿಗೆ  ಬಯಸಿದ ಫಲಿತಾಂಶ ದೊರೆಯಲಿದೆ. ಕೌಟುಂಬಿಕ ವಿಷಯಗಳತ್ತ  ಗಮನಹರಿಸ ಬೇಕಾಗುವುದು. ಜನರೊಂದಿಗೆ ಬೆರೆಯುವ ಅಭ್ಯಾಸವನ್ನು ಮಾಡಿಕೊಳ್ಳಿ.
ಮೀನ
ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳಲು ಸಹೋದರರ ಉತ್ತಮ ಸಹಕಾರ ದೊರೆಯುವುದು. ಹಠ ಸ್ವಭಾವವನ್ನು ಕಡಿಮೆ ಮಾಡುವುದರಿಂದ ಏಳಿಗೆ ಇರುವುದು. ಪ್ರೇಮಿಗಳ ಪಾಲಿಗೆ ಈ ದಿನ ಅತ್ಯುತ್ತಮ.
ADVERTISEMENT
ADVERTISEMENT