ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಕೆಲಸಗಳಲ್ಲಿ ಪ್ರವೀಣತೆ ಪಡೆಯುವಿರಿ
Published 8 ಜುಲೈ 2024, 23:54 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಹಾರದಲ್ಲಿನ ವ್ಯತ್ಯಾಸದಿಂದಾಗಿ ಕಾಯಿಲೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆಗುವುದು. ಈ ದಿನದ ತಪ್ಪುಗಳಿಗೆ ಸಣ್ಣ ವಯಸ್ಸಿನಿಂದಾಗಿ ಈ ಕ್ಷಣಕ್ಕೆ ಕ್ಷಮೆ ಸಿಗಬಹುದು.
ವೃಷಭ
ಸಂಸಾರದ ಘನತೆ ಹೆಚ್ಚಿಸುವುದಕ್ಕೆ ಸಾಹಸ ಪಡುತ್ತಿರುವ ನಿಮಗೆ ಹೆಂಡತಿ ಮಕ್ಕಳು ನೆರವಾಗುವರು. ಕ್ಲಿಪ್ತ ಸಮಯಕ್ಕೆ ಬೇಕಾದ ವಸ್ತುಗಳು ಇಲ್ಲದಿದ್ದರೂ ಸ್ನೇಹಿತರಿಂದ ಬಂದೊದಗುತ್ತದೆ.
ಮಿಥುನ
ಕೆಲವು ಸಮಯದಲ್ಲಿ ಅಜ್ಞಾನದಿಂದ ಮಾಡಿದ ತಪ್ಪು ಕೆಲಸವು ಭವಿಷ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕಾಯಿಲೆಗೆಂದು ತೆಗೆದುಕೊಂಡ ಔಷಧಿಯು ಅನಾರೋಗ್ಯಕ್ಕೆ ದಾರಿಯಾಗಬಹುದು.
ಕರ್ಕಾಟಕ
ರಾಜಕಾರಣದ ರಹಸ್ಯ ಮಾತುಕತೆಗಳಲ್ಲಿ ಸ್ಥಾನ ಪ್ರಮುಖವಾಗಿರುವುದು. ಆರಾಧ್ಯ ದೇವತೆ ಅಭೀಷ್ಟವನ್ನು ನೆರವೇರಿಸುವುದರಿಂದ ಹರಕೆ ತೀರಿಸುವಿರಿ. ಪ್ರಾರ್ಥನೆಯ ಪರಿಣಾಮ ವಧು ದೊರೆಯುವಳು.
ಸಿಂಹ
ಹಲವು ದಿನಗಳ ಬಿಗುವಾದ ದಿನಚರಿಯ ನಂತರ ಹಳೆಯ ದಿನಚರಿಗೆ ಮರಳುವಿರಿ. ಬ್ಯಾಂಕ್ ಉದ್ಯಮವನ್ನು ಮಾಡುವ ಸಾಮರ್ಥ್ಯ ಇದೆ ಎಂದು ಧೈರ್ಯವಿದ್ದರಷ್ಟೇ ಪರೀಕ್ಷೆ ಕಟ್ಟುವ ಸಾಹಸ ಮಾಡಿ.
ಕನ್ಯಾ
ಮಗಳ ಮಾತಿಗೆ ಬೆಲೆ ಕೊಟ್ಟು ಆಕೆಯ ಇಚ್ಛೆಯಂತೆಯೇ ಆಗಲು ಬಿಟ್ಟರೂ ಮನಸ್ಸಿಗೆ ನೋವು ಮಾಡಬಹುದು. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಕೆಲಸಗಳಲ್ಲಿ ಪ್ರವೀಣತೆ ಪಡೆಯುವಿರಿ.
ತುಲಾ
ವಿದ್ವಜ್ಜನರ ಎದುರು ಮಾತನಾಡುವ ಬದಲು ಮೌನವೇ ಗೌರವವನ್ನು ಹೆಚ್ಚುಗೊಳಿಸುತ್ತದೆ. ವೃತ್ತಿಯಲ್ಲಿ ಜವಾಬ್ದಾರಿಯು ಇರುವುದರಿಂದ ವೈಯಕ್ತಿಕ ಜೀವನದಲ್ಲಿನ ಗಮನ ಕಡಿಮೆ ಅಗುವುದು.
ವೃಶ್ಚಿಕ
ಅಳಿಯನ ಸಹಾಯದಿಂದಾಗಿ ಹೊಸ ನಿವೇಶನ ಖರೀದಿಸುವಿರಿ. ಆಲಸ್ಯದ ಕಾರಣವಾಗಿ ನಿತ್ಯದ ಕೆಲಸಗಳು ನಿಂತು ಹೋಗುವ ಸಾಧ್ಯತೆ ಇದೆ. ಗಾರ್ಮೆಂಟ್ ಉದ್ಯಮದವರು ಲಾಭ ಹೊಂದಲಿದ್ದೀರಿ.
ಧನು
ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದವರನ್ನು ಆ ಜಾಲದಿಂದ ಹೊರತರಲು ವಿಧ ವಿಧವಾದ ಪ್ರಯತ್ನ ನಡೆಸುವಿರಿ. ಸ್ವಾರ್ಥದಿಂದ ವ್ಯವಹರಿಸಿದ್ದರಿಂದ ಪಶ್ಚಾತಾಪ ಪಡುವಂತಾಗುವುದು. ಆಹಾರ ಸೇವನೆಗೆ ಮಿತಿಯಿರಲಿ.
ಮಕರ
ದೇವರ ಕೃಪೆಯಿಂದಾಗಿ ವ್ಯವಹಾರ ಕ್ಷೇತ್ರದಲ್ಲಿ ಆಗಬೇಕಾದ ಅನಾಹುತಗಳು ನಿವಾರಣೆಯಾಗುತ್ತದೆ. ಕಾಗದ ಪತ್ರಗಳಿಗೆ ಓದಿಯೇ ಸಹಿ ಹಾಕುವುದನ್ನು ಅಭ್ಯಸಿಸಿಕೊಳ್ಳಿರಿ. ಅನವಶ್ಯಕ ವಸ್ತು ಖರೀದಿ ಮಾಡದಿರಿ.
ಕುಂಭ
ಇಷ್ಟವೆಂದು ಅಧಿಕವಾಗಿ ಸೇವಿಸಿದ ಆಹಾರವು ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ. ಮಾತಿನಂತೆ ನಡೆಯದ ಮಕ್ಕಳ ಮೇಲೆ ಬೇಸರವಾಗುತ್ತದೆ. ಸಂಜೆಯ ಸಮಯದಲ್ಲಿ ಅನಾರೋಗ್ಯ ಕಾಡಲಿದೆ.
ಮೀನ
ಪುರುಷ ಸ್ತ್ರೀಯರ ನಡುವಿನ ಅಂತರವನ್ನು ಮನೆಯಲ್ಲಿ ಕಡಿಮೆ ಮಾಡುವ ಸರ್ವ ಪ್ರಯತ್ನ ಮಾಡುವಿರಿ. ಚಿನ್ನಾಭರಣ,ಬೆಳ್ಳಿಯ ಸಾಮಗ್ರಿಗಳನ್ನು ಖರೀದಿಸುವ ಸಾಧ್ಯತೆ ಇದೆ. ವ್ಯಸನಗಳಿಂದ ಮುಕ್ತಿ ಪಡೆಯುವಿರಿ.